alex Certify ಮಾರಾಟವಾಗ್ತಿದೆ ವಿಶ್ವದ ಅತ್ಯಂತ ಕೊಳಕು ಮನೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರಾಟವಾಗ್ತಿದೆ ವಿಶ್ವದ ಅತ್ಯಂತ ಕೊಳಕು ಮನೆ..!

ಯುಕೆಯ ಡೆವೊನ್‌ನ ಪ್ಲೈಮೊತ್‌ನಲ್ಲಿ ಮನೆ ಮಾರಾಟಕ್ಕಿದೆ. ಮನೆ ಮಾರಾಟಕ್ಕಿದೆ ಎಂಬ ಬೋರ್ಡ್ ಎಲ್ಲ ಕಡೆ ಇರುತ್ತದೆ. ಅದರಲ್ಲಿ ಏನು ವಿಶೇಷ ಎನ್ನಬೇಡಿ. ಇದ್ರಲ್ಲಿ ವಿಶೇಷತೆಯಿದೆ.

ಈ ಮನೆ ಚರ್ಚೆಯಾಗಲು ಕಾರಣ ಅಲ್ಲಿ ಸಂಗ್ರಹವಾದ ಕಸ. ವರದಿಯ ಪ್ರಕಾರ, ಜನರು ಇದನ್ನು ವಿಶ್ವದ ಅತ್ಯಂತ ಕೊಳಕು ಮನೆ ಎಂದು ಕರೆಯುತ್ತಿದ್ದಾರೆ.

ಹಲವು ವರ್ಷಗಳಿಂದ ಖಾಲಿ ಬಿದ್ದಿರುವ ಈ ಮನೆ ಈಗ ಮಾರಾಟವಾಗಲಿದೆ. ಮನೆಯನ್ನು ಸ್ವಚ್ಛಗೊಳಿಸದೇ ಮಾರಾಟಕ್ಕೆ ಇಟ್ಟಿರುವುದು ಅತ್ಯಂತ ಅಚ್ಚರಿಯ ಸಂಗತಿ. ಅದೇನೆಂದರೆ, ಈ ಮನೆಯನ್ನು ಯಾರು ಖರೀದಿಸುತ್ತಾರೋ ಅವರಿಗೆ 13 ವರ್ಷಗಳಿಂದ ಸಂಗ್ರಹವಾದ ಕಸವೂ ಒಟ್ಟಿಗೆ ಸಿಗುತ್ತದೆ.

ಕೃಷಿ ಕ್ಷೇತ್ರದಲ್ಲಿದೆ ಸಾಕಷ್ಟು ಉದ್ಯೋಗವಕಾಶ

ಪ್ರಸ್ತುತ, ಈ ಮನೆಯನ್ನು ಪ್ರಾಪರ್ಟಿ ಕಂಪನಿ ಸ್ವಾಧೀನಪಡಿಸಿಕೊಂಡಿದೆ. ಈ ಮನೆಯು ಮೂಲತಃ ವಯಸ್ಸಾದ ದಂಪತಿ ಮತ್ತು ಅವರ ಮಗನಿಗೆ ಸೇರಿದ್ದು.  ವೃದ್ಧ ತಂದೆ-ತಾಯಿ ಇಬ್ಬರೂ ಸಾವನ್ನಪ್ಪಿದ್ದಾರೆ. ಮಗನಿಗೆ ಈ ಮನೆಯ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಡಿಸೆಂಬರ್ 2008 ರ ಹಿಂದಿನ ವೃತ್ತಪತ್ರಿಕೆ ಬೆಡ್ ರೂಮ್‌ನ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ.

ಮನೆ ಒಳಗೆ ಮಾತ್ರವಲ್ಲ ಹೊರಗೂ ಸಾಕಷ್ಟು ಕಸವಿದೆ. ಮನೆಯೊಳಗಿನ ಮೆಟ್ಟಿಲುಗಳ ಮೇಲೆ ತುಂಬ ಕಸ ಹರಡಿಕೊಂಡಿದ್ದು, ಇಡೀ ಪ್ರದೇಶವೇ ಕಸದಂತಾಗಿದೆ. ಕಳೆದ 13 ವರ್ಷಗಳಿಂದ ಈ ಕಸವನ್ನು ತೆಗೆದಿಲ್ಲ.

13 ವರ್ಷಗಳಿಂದ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿಲ್ಲ. ಕೊಳಕು ಸಿಂಕ್ ಫೋಟೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...