ಯುಕೆಯ ಡೆವೊನ್‌ನ ಪ್ಲೈಮೊತ್‌ನಲ್ಲಿ ಮನೆ ಮಾರಾಟಕ್ಕಿದೆ. ಮನೆ ಮಾರಾಟಕ್ಕಿದೆ ಎಂಬ ಬೋರ್ಡ್ ಎಲ್ಲ ಕಡೆ ಇರುತ್ತದೆ. ಅದರಲ್ಲಿ ಏನು ವಿಶೇಷ ಎನ್ನಬೇಡಿ. ಇದ್ರಲ್ಲಿ ವಿಶೇಷತೆಯಿದೆ.
ಈ ಮನೆ ಚರ್ಚೆಯಾಗಲು ಕಾರಣ ಅಲ್ಲಿ ಸಂಗ್ರಹವಾದ ಕಸ. ವರದಿಯ ಪ್ರಕಾರ, ಜನರು ಇದನ್ನು ವಿಶ್ವದ ಅತ್ಯಂತ ಕೊಳಕು ಮನೆ ಎಂದು ಕರೆಯುತ್ತಿದ್ದಾರೆ.
ಹಲವು ವರ್ಷಗಳಿಂದ ಖಾಲಿ ಬಿದ್ದಿರುವ ಈ ಮನೆ ಈಗ ಮಾರಾಟವಾಗಲಿದೆ. ಮನೆಯನ್ನು ಸ್ವಚ್ಛಗೊಳಿಸದೇ ಮಾರಾಟಕ್ಕೆ ಇಟ್ಟಿರುವುದು ಅತ್ಯಂತ ಅಚ್ಚರಿಯ ಸಂಗತಿ. ಅದೇನೆಂದರೆ, ಈ ಮನೆಯನ್ನು ಯಾರು ಖರೀದಿಸುತ್ತಾರೋ ಅವರಿಗೆ 13 ವರ್ಷಗಳಿಂದ ಸಂಗ್ರಹವಾದ ಕಸವೂ ಒಟ್ಟಿಗೆ ಸಿಗುತ್ತದೆ.
ಕೃಷಿ ಕ್ಷೇತ್ರದಲ್ಲಿದೆ ಸಾಕಷ್ಟು ಉದ್ಯೋಗವಕಾಶ
ಪ್ರಸ್ತುತ, ಈ ಮನೆಯನ್ನು ಪ್ರಾಪರ್ಟಿ ಕಂಪನಿ ಸ್ವಾಧೀನಪಡಿಸಿಕೊಂಡಿದೆ. ಈ ಮನೆಯು ಮೂಲತಃ ವಯಸ್ಸಾದ ದಂಪತಿ ಮತ್ತು ಅವರ ಮಗನಿಗೆ ಸೇರಿದ್ದು. ವೃದ್ಧ ತಂದೆ-ತಾಯಿ ಇಬ್ಬರೂ ಸಾವನ್ನಪ್ಪಿದ್ದಾರೆ. ಮಗನಿಗೆ ಈ ಮನೆಯ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಡಿಸೆಂಬರ್ 2008 ರ ಹಿಂದಿನ ವೃತ್ತಪತ್ರಿಕೆ ಬೆಡ್ ರೂಮ್‌ನ ನೆಲದ ಮೇಲೆ ಬಿದ್ದಿರುವುದು ಕಂಡುಬಂದಿದೆ.
ಮನೆ ಒಳಗೆ ಮಾತ್ರವಲ್ಲ ಹೊರಗೂ ಸಾಕಷ್ಟು ಕಸವಿದೆ. ಮನೆಯೊಳಗಿನ ಮೆಟ್ಟಿಲುಗಳ ಮೇಲೆ ತುಂಬ ಕಸ ಹರಡಿಕೊಂಡಿದ್ದು, ಇಡೀ ಪ್ರದೇಶವೇ ಕಸದಂತಾಗಿದೆ. ಕಳೆದ 13 ವರ್ಷಗಳಿಂದ ಈ ಕಸವನ್ನು ತೆಗೆದಿಲ್ಲ.
13 ವರ್ಷಗಳಿಂದ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿಲ್ಲ. ಕೊಳಕು ಸಿಂಕ್ ಫೋಟೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.