alex Certify BREAKING: ರಾಜ್ಯದಲ್ಲಿ ಒಮಿಕ್ರಾನ್ ಉಪತಳಿಗೆ ಮೂವರ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ರಾಜ್ಯದಲ್ಲಿ ಒಮಿಕ್ರಾನ್ ಉಪತಳಿಗೆ ಮೂವರ ಸಾವು

ಬೆಂಗಳೂರು: ರಾಜ್ಯದಲ್ಲಿ 35 ಒಮಿಕ್ರಾನ್ ಉಪತಳಿ ಜೆಎನ್.1 ಕೇಸ್ ಇರುವ ಮಾಹಿತಿ ಇದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪರೀಕ್ಷೆ ಸಂದರ್ಭದಲ್ಲಿ ಜೆಎನ್.1 ಇದೆ ಎಂದು ಗೊತ್ತಾಗಿ ಜಿನೋಮಿಕ್ ಸೀಕ್ವೆನ್ಸ್ ಗೆ ಕಳಿಸಿದ್ದು, ವರದಿ ಬಂದಿದೆ. ಬೆಂಗಳೂರಿನಲ್ಲಿ 20, ಮೈಸೂರಿನಲ್ಲಿ 4, ಮಂಡ್ಯ ಜಿಲ್ಲೆಯಲ್ಲಿ 3, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಾಮರಾಜನಗರ, ರಾಮನಗರ, ಕೊಡಗು ಜಿಲ್ಲೆಯಲ್ಲಿ ತಲಾ ಒಂದು ಒಮಿಕ್ರಾನ್ ಉಪತಳಿ ಜೆಎನ್.1 ಕೇಸ್ ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಜೆಎನ್.1 ಸೋಂಕಿಗೆ ಮೂವರು ಮೃತಪಟ್ಟಿದ್ದಾರೆ. ಮೃತಪಟ್ಟವರ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದೇವೆ. ಅವರು ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದರು. ಬೇರೆ ಬೇರೆ ಕಾಯಿಲೆ ಜೊತೆಗೆ ಜೆಎನ್.1  ಸೋಂಕು ತಗುಲಿತ್ತು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...