ಮೈ-ಕೈ ಎಲ್ಲಾ ನೆಟ್ಟಗಿರುವ ನಮ್ಮಲ್ಲಿ ಅದೆಷ್ಟೋ ಮಂದಿಗೆ ಸೋಗಲಾಡಿತನ ವಕ್ಕರಿಸಿಕೊಂಡಿರುತ್ತದೆ. ಅಂಥದ್ದರಲ್ಲಿ ದಿವ್ಯಾಂಗಿಗಳಲ್ಲಿ ಅನೇಕರು ಎಲ್ಲರ ಹುಬ್ಬೇರುವ ಸಾಧನೆಗಳನ್ನು ಮಾಡುವ ಲೆಕ್ಕವಿಲ್ಲದಷ್ಟು ನಿದರ್ಶನಗಳನ್ನು ನೋಡುತ್ತಲೇ ಇರುತ್ತೇವೆ.
ವೆನಿಜುಯೆಲಾದ ಆಂಡ್ರೆಯ್ನಾ ಹೆರ್ನಾಂಡೆಝ್ ಅಂಥ ಸಾಧಕಿಯರಲ್ಲಿ ಒಬ್ಬರು. ಅಪಘಾತದಲ್ಲಿ ಒಂದು ಕಾಲನ್ನು ಕಳೆದುಕೊಂಡರೂ ಆಂಡ್ರೆಯ್ನಾ ತಮ್ಮ ಅದ್ಭುತ ಡ್ಯಾನ್ಸ್ ಮೂಲಕ ನೋಡುಗರ ಅಚ್ಚರಿಗೊಳಿಸಿದ್ದಾರೆ. ಈಕೆಯ ಮಿಂಚಿನ ಸಾಲ್ಸಾ ನೃತ್ಯದ ವಿಡಿಯೋಗಳು ಅಂತರ್ಜಾಲದಲ್ಲಿ ಸೆನ್ಸೇಷನ್ ಸೃಷ್ಟಿಸಿವೆ.
ಸಾಲ್ಸಾ ಕ್ಯಾಸಿನೋದ ಸೋಷಿಯಲ್ ನೃತ್ಯ ಸಿರಿಯಲ್ಲಿ ತಮ್ಮ ನೃತ್ಯದ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ ಆಂಡ್ರೆಯ್ನಾ. ಯಾವ ಜಾಗದಲ್ಲಿ ಅಪಘಾತವಾಗಿ ತಮ್ಮ ಕಾಲನ್ನು ಕಳೆದುಕೊಂಡರೋ ಅದೇ ಜಾಗದಲ್ಲಿ ಈ ನೃತ್ಯಸಿರಿ ಆಯೋಜನೆ ಮಾಡಿದ್ದು, ತನಗೆ ಅದೊಂದು ಭಾವುಕ ಕ್ಷಣ ಎಂದು ಆಂಡ್ರೆಯ್ನಾ ಹೇಳಿಕೊಂಡಿದ್ದಾರೆ.
ಮತ್ತೊಂದು ಆಕರ್ಷಣೀಯ ಟ್ವೀಟ್ ಮೂಲಕ ನೆಟ್ಟಿಗರನ್ನು ಆಕರ್ಷಿಸಿದ ಆಸ್ಸಾಂ ಪೊಲೀಸ್
“ಈ ನಷ್ಟ ಒಂದು ಅಡಚಣೆಯೇ ಆಗಿರಲಿಲ್ಲ. ನಾನು ಮತ್ತೆ ನೃತ್ಯ ಮಾಡಬಲ್ಲೆ ಎಂದು ಅರಿತ ಮೊದಲ ಕ್ಷಣವೇ, ನನ್ನನ್ನು ತಡೆಯಲು ಏನು ಇರಲಿಲ್ಲ. ಸಮಯ ಮುಗಿಯುವವರೆಗೂ ನನಗೇನು ಬೇಕೋ ಅದನ್ನು ಮಾಡುತ್ತಾ ಇರುತ್ತೇನೆ” ಎಂದು ಈ ಕಲಾವಿದೆ ಬರೆದಿದ್ದಾರೆ.
‘ಮೊಬೈಲ್’ ಬಳಕೆಯಲ್ಲಿರಲಿ ಈ ಎಚ್ಚರ….!
2016ರಲ್ಲಿ ತಮ್ಮ ಡ್ಯಾನ್ಸ್ ಅಕಾಡೆಮಿಯ ಮುಂದೆ ಅಪಘಾತವೊಂದರಲ್ಲಿ ಆಂಡ್ರೆಯ್ನಾ ತಮ್ಮ ಎಡಗಾಲು ಕಳೆದುಕೊಂಡಿದ್ದರು. ಇದಾದ ಎರಡು ವರ್ಷಗಳ ಬಳಿಕ ಆಂಡ್ರೆಯ್ನಾ ಮರಳಿ ಡ್ಯಾನ್ಸ್ ಅಖಾಡಕ್ಕೆ ಆಗಮಿಸಿದ್ದರು.
2020ರಲ್ಲಿ ತುಂಬು ಗರ್ಭಿಣಿಯಾಗಿದ್ದ ವೇಳೆಯೂ ತಮ್ಮ ಮಸ್ತ್ ಸ್ಟೆಪ್ಗಳನ್ನು ಹಾಕುತ್ತಲೇ ವಿಡಿಯೋ ಅಪ್ಲೋಡ್ ಮಾಡಿದ್ದ ಆಂಡ್ರೆಯ್ನಾ, ಆಗಲೂ ಸಂಚಲನ ಸೃಷ್ಟಿಸಿದ್ದರು.
https://www.instagram.com/tv/CPfBvxxpXAI/?utm_source=ig_web_copy_link