alex Certify ಪೆಟ್ರೋಲ್​ ಹಾದಿಯಲ್ಲೇ ಸಾಗಿದ ಡೀಸೆಲ್​ ದರ: ರಾಜ್ಯದಲ್ಲಿ ಶತಕ ದಾಟಿದ ಡೀಸೆಲ್​​ ಬೆಲೆ, ಆತಂಕದಲ್ಲಿ ಶ್ರೀಸಾಮಾನ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೆಟ್ರೋಲ್​ ಹಾದಿಯಲ್ಲೇ ಸಾಗಿದ ಡೀಸೆಲ್​ ದರ: ರಾಜ್ಯದಲ್ಲಿ ಶತಕ ದಾಟಿದ ಡೀಸೆಲ್​​ ಬೆಲೆ, ಆತಂಕದಲ್ಲಿ ಶ್ರೀಸಾಮಾನ್ಯ

ತೈಲೋತ್ಪನ್ನಗಳ ದರದಲ್ಲಿ ಗಣನೀಯ ಪ್ರಮಾಣದಲ್ಲಿ ಕಂಡು ಬರುತ್ತಿರುವ ಏರಿಕೆಯು ಶ್ರೀಸಾಮಾನ್ಯನ ನಿದ್ದೆಗೆಡಿಸಿದೆ. ಎರಡು ತಿಂಗಳ ಹಿಂದಷ್ಟೆಯೇ ಪೆಟ್ರೋಲ್​ ದರ ಪ್ರತಿ ಲೀಟರ್​ಗೆ ನೂರರ ಗಡಿ ದಾಟಿತ್ತು. ಇದೀಗ ಡೀಸೆಲ್​ ಕೂಡ ತನ್ನ ನಾಗಾಲೋಟವನ್ನು ಮುಂದುವರಿಸಿದ್ದು ರಾಜ್ಯದಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ ಕೂಡ ನೂರು ರೂಪಾಯಿ ದಾಟಿದಂತಾಗಿದೆ.

ಇಲ್ಲಿವೆ ಭಾರತದಲ್ಲಿ ಪ್ರವಾಸಕ್ಕೆ ಹೋಗಲು ಕೆಲವು ಅತ್ಯುತ್ತಮ ತಾಣ

ವಿಜಯನಗರದ ಹೊಸಪೇಟೆಯಲ್ಲಿ ಪ್ರತಿ ಲೀಟರ್​ ಡೀಸೆಲ್​ ದರ ಇಂದು 100.10 ರೂಪಾಯಿ ಆಗಿದೆ. ಭಾನುವಾರ 99.75 ರೂಪಾಯಿ ಇದ್ದ ಡೀಸೆಲ್​ ದರ ಇಂದು ಮತ್ತೆ 35 ಪೈಸೆ ಏರಿಕೆ ಕಾಣುವ ಮೂಲಕ ಶತಕ ದಾಟಿದೆ. ಇತ್ತ ಪೆಟ್ರೋಲ್​ ದರ ಪ್ರತಿ ಲೀಟರ್​ಗೆ 109.95 ರೂಪಾಯಿ ಆಗಿದೆ.

ಕೇವಲ ಪೆಟ್ರೋಲ್​ ಡೀಸೆಲ್​ ಮಾತ್ರವಲ್ಲದೇ ಎಲ್​ಪಿಜಿ ಸಿಲಿಂಡರ್​, ಅಕ್ಕಿ, ಶೇಂಗಾ, ಮೈದಾ ಹಿಟ್ಟು, ರವೆ ಸೇರಿದಂತೆ ವಿವಿಧ ದವಸ ಧಾನ್ಯಗಳು, ಅಡುಗೆ ಎಣ್ಣೆ ಪ್ರವಾಸಿ ಟ್ಯಾಕ್ಸಿ ಎಲ್ಲದರ ಬೆಲೆಯಲ್ಲೂ ಏರಿಕೆ ಕಾಣುತ್ತಿದ್ದು ಜೀವನ ಸಾಗಿಸುವುದು ಹೇಗೆ ಎಂದು ಜನತೆ ತಲೆ ಮೇಲೆ ಕೈ ಹೊತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...