ತೈಲೋತ್ಪನ್ನಗಳ ದರದಲ್ಲಿ ಗಣನೀಯ ಪ್ರಮಾಣದಲ್ಲಿ ಕಂಡು ಬರುತ್ತಿರುವ ಏರಿಕೆಯು ಶ್ರೀಸಾಮಾನ್ಯನ ನಿದ್ದೆಗೆಡಿಸಿದೆ. ಎರಡು ತಿಂಗಳ ಹಿಂದಷ್ಟೆಯೇ ಪೆಟ್ರೋಲ್ ದರ ಪ್ರತಿ ಲೀಟರ್ಗೆ ನೂರರ ಗಡಿ ದಾಟಿತ್ತು. ಇದೀಗ ಡೀಸೆಲ್ ಕೂಡ ತನ್ನ ನಾಗಾಲೋಟವನ್ನು ಮುಂದುವರಿಸಿದ್ದು ರಾಜ್ಯದಲ್ಲಿ ಪ್ರತಿ ಲೀಟರ್ ಡೀಸೆಲ್ ದರ ಕೂಡ ನೂರು ರೂಪಾಯಿ ದಾಟಿದಂತಾಗಿದೆ.
ಇಲ್ಲಿವೆ ಭಾರತದಲ್ಲಿ ಪ್ರವಾಸಕ್ಕೆ ಹೋಗಲು ಕೆಲವು ಅತ್ಯುತ್ತಮ ತಾಣ
ವಿಜಯನಗರದ ಹೊಸಪೇಟೆಯಲ್ಲಿ ಪ್ರತಿ ಲೀಟರ್ ಡೀಸೆಲ್ ದರ ಇಂದು 100.10 ರೂಪಾಯಿ ಆಗಿದೆ. ಭಾನುವಾರ 99.75 ರೂಪಾಯಿ ಇದ್ದ ಡೀಸೆಲ್ ದರ ಇಂದು ಮತ್ತೆ 35 ಪೈಸೆ ಏರಿಕೆ ಕಾಣುವ ಮೂಲಕ ಶತಕ ದಾಟಿದೆ. ಇತ್ತ ಪೆಟ್ರೋಲ್ ದರ ಪ್ರತಿ ಲೀಟರ್ಗೆ 109.95 ರೂಪಾಯಿ ಆಗಿದೆ.
ಕೇವಲ ಪೆಟ್ರೋಲ್ ಡೀಸೆಲ್ ಮಾತ್ರವಲ್ಲದೇ ಎಲ್ಪಿಜಿ ಸಿಲಿಂಡರ್, ಅಕ್ಕಿ, ಶೇಂಗಾ, ಮೈದಾ ಹಿಟ್ಟು, ರವೆ ಸೇರಿದಂತೆ ವಿವಿಧ ದವಸ ಧಾನ್ಯಗಳು, ಅಡುಗೆ ಎಣ್ಣೆ ಪ್ರವಾಸಿ ಟ್ಯಾಕ್ಸಿ ಎಲ್ಲದರ ಬೆಲೆಯಲ್ಲೂ ಏರಿಕೆ ಕಾಣುತ್ತಿದ್ದು ಜೀವನ ಸಾಗಿಸುವುದು ಹೇಗೆ ಎಂದು ಜನತೆ ತಲೆ ಮೇಲೆ ಕೈ ಹೊತ್ತಿದ್ದಾರೆ.