alex Certify ವಿದೇಶಕ್ಕೆ ನಿಮ್ಮ ಮಗ ಸಾಯಲಿ ಅಂತಲೇ ಕಳಿಸಿದ್ರಾ..? : ಸಿಎಂ ಸಿದ್ದರಾಮಯ್ಯಗೆ ‘HDK’ ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶಕ್ಕೆ ನಿಮ್ಮ ಮಗ ಸಾಯಲಿ ಅಂತಲೇ ಕಳಿಸಿದ್ರಾ..? : ಸಿಎಂ ಸಿದ್ದರಾಮಯ್ಯಗೆ ‘HDK’ ತಿರುಗೇಟು

ಬೆಂಗಳುರು : ಪಜ್ವಲ್ ಅವರನ್ನು ವಿದೇಶಕ್ಕೆ ದೇವೇಗೌಡರೇ ಕಳಿಸಿದ್ದಾರೆ ಎಂದು ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಹೆಚ್.ಡಿ.ಕುಮಾರಸ್ವಾಮಿ ಅವರು, ವಿದೇಶಕ್ಕೆ ನಿಮ್ಮ ಮಗನನ್ನು ಸಾಯಲಿ ಅಂತಲೇ ಕಳಿಸಿದಿರಾ? ಎಂದು ತಿರುಗೇಟು ನೀಡಿದ್ದಾರೆ.

ನಿಮ್ಮ ಸುಪುತ್ರ ದಿವಂಗತ ರಾಕೇಶ್ ಅವರನ್ನು Tomorrow Land ಎನ್ನುವ ಅಮಲಿನ ಪಾರ್ಟಿಗೆ ನೀವೇ ಕಳಿಸಿದ್ದೀರಿ, ಅಲ್ಲಿ ಅವರ ಸಾವಿಗೆ ನೀವೇ ಕಾರಣರಾದಿರಿ ಎಂದು ಯಾರಾದರೂ ನಿಮ್ಮನ್ನು ಕೇಳಿದರೆ ನಿಮ್ಮ ಮನಸ್ಸಿಗೆ ಹೇಗಾಗಬೇಡ? ದೇವೇಗೌಡರ ಬಗ್ಗೆ ನೀವು ಕೇಳಿದ್ದು ಕೂಡ ಹಾಗೆಯೇ ಅಲ್ಲವೇ ಮಾನ್ಯ ಮುಖ್ಯಮಂತ್ರಿಗಳೇ.. ಶೋಕದ ಮನೆಯಲ್ಲಿ ರಾಜಕೀಯ ಮಾಡುವ ಜಾಯಮಾನ ನಮ್ಮದಲ್ಲ. ದಯಮಾಡಿ ಅರ್ಥ ಮಾಡಿಕೊಳ್ಳಿ. ಎಂದು ತಿರುಗೇಟು ನೀಡಿದ್ದಾರೆ.

ಯಾರಿಗೆ ಆಗಲಿ ನೋವು ನೋವೇ. ನಿಮ್ಮ ಕುಟುಂಬದಲ್ಲಿ ಒಂದು ಘಟನೆ ನಡೆದಿದೆ. ಆಗ ನಿಮ್ಮ ಮಗನನ್ನು ನೀವೇ ಕಳಿಸಿದಿರಾ? ಅವರ ಸಾವಿಗೆ ನೀವೇ ಕಾರಣರಾ? ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ತಕ್ಷಣ ವಾಪಸ್ ಬಂದು ತನಿಖೆಗೆ ಹಾಜರಾಗು ಎಂದು ಪ್ರಜ್ವಲ್ ಗೆ ಸಂದೇಶ ಕೊಟ್ಟಿದ್ದೇನೆ. ದೇವೇಗೌಡರು ಕೊನೆ ಎಚ್ಚರಿಕೆ ಕೊಟ್ಟಿದ್ದಾರೆ. ರಾಜತಾಂತ್ರಿಕ ಪಾಸ್ ಪೋರ್ಟ್ ಬಗ್ಗೆ ಇವರೆಲ್ಲಾ ಮಾತನಾಡುತ್ತಿದ್ದಾರೆ. ಆದರೆ ಇವರಿಗೆ ಕಾನೂನಿನ ತಿಳಿವಳಿಕೆಯೇ ಇಲ್ಲ ಎಂದರು.

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...