ಮದುವೆಗಳು ಎಂದರೆ ಬರೀ ಭರ್ಜರಿ ಕಾರ್ಯಕ್ರಮ ಹಾಗೂ ಊಟದಿಂದ ಮಾತ್ರವಲ್ಲ, ನವವಿವಾಹಿತರು ಪಡೆಯುವ ಉಡುಗೊರೆಗಳಿಂದಲೂ ಗಮನ ಸೆಳೆಯುತ್ತವೆ. ಬಾಲಿವುಡ್ ಮದುವೆಗಳು ಎಂದರಂತೂ ಕೇಳಬೇಕೇ? ಸಮಾರಂಭದ ಪ್ರತಿಯೊಂದು ಕ್ಷಣವನ್ನೂ ಅದ್ಧೂರಿಯಾಗಿ ಅರೇಂಜ್ ಮಾಡಲಾಗಿರುತ್ತದೆ. ಆ ವೇಳೆ ಯಾವೆಲ್ಲಾ ಅತಿಥಿಗಳು ಏನೆಲ್ಲಾ ಉಡುಗೊರೆ ಕೊಟ್ಟರು ಎಂಬ ಮಾತುಗಳೂ ಸಹ ಪ್ರತಿಧ್ವನಿಸುತ್ತವೆ.
ಕೇವಲ ಪಬ್ಗಳನ್ನೇ ಸುತ್ತಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ ಈ ಮಹಾನುಭಾವ…..!
ರಿಷಿ ಕಪೂರ್ ಹಾಗೂ ನೀತು ಕಪೂರ್ ತಮ್ಮ ಮದುವೆಗೆ ಉಡುಗೊರೆ ರೂಪದಲ್ಲಿ ಒಂದು ಡಬ್ಬಿ ತುಂಬಾ ಕಲ್ಲುಗಳನ್ನು ಪಡೆದಿದ್ದರಂತೆ ! 2013ರಲ್ಲಿ ತಮ್ಮ ಮದುವೆಯ ಆರತಕ್ಷತೆ ಸಮಾರಂಭದ ಕುರಿತು ಮಾತನಾಡಿದ್ದರು.
ಯಾರೋ ಒಂದಷ್ಟು ಮಂದಿ ಒಳ್ಳೆಯ ಬಟ್ಟೆ ಹಾಕಿಕೊಂಡು ಬಂದ ಕಾರಣ ಭದ್ರತಾ ಸಿಬ್ಬಂದಿ ಅವರನ್ನು ಒಳಗೆ ಬಿಟ್ಟಿದ್ದಾರೆ. ಆ ಮಂದಿಯೇ ರಿಷಿ ಮತ್ತು ನೀತು ದಂಪತಿಗೆ ಡಬ್ಬಿ ತುಂಬಾ ಕಲ್ಲು ತಂದುಕೊಟ್ಟಿದ್ದಾರೆ.
ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಹೊಸ ನಿಯಮಾವಳಿ, ಪಿ.ಹೆಚ್.ಡಿ. ಕಡ್ಡಾಯವಲ್ಲ ಎಂದ ಯುಜಿಸಿ
ಇದೇ ವೇಳೆ, ತಾವು ಮದುವೆಗೆ ಧರಿಸಿದ್ದ ವಿಶೇಷ ಲೆಹಂಗಾ ವಿಪರೀತ ಭಾರವಿದ್ದ ಕಾರಣ ಇಡೀ ದಿನ ಅತಿಥಿಗಳೊಂದಿಗೆ ಮಾತನಾಡುತ್ತಾ ನಿಂತು ಕುಸಿದು ಬಿದ್ದಿದ್ದಾಗಿ ನೀತು ಹೇಳಿಕೊಂಡಿದ್ದಾರೆ. ತಮಗೂ ಹೀಗೆ ಆಗಿದ್ದಾಗಿ ರಿಷಿ ಕಪೂರ್ ಸಹ ಹೇಳಿಕೊಂಡಿದ್ದರು.
ಆರ್ಕೆ ಹೌಸ್ನಲ್ಲಿ ನೀತು ಹಾಗೂ ರಿಷಿ ಮದುವೆ ಸಮಾರಂಭ ಏರ್ಪಡಿಸಲಾಗಿತ್ತು, ಚೆಂಬೂರ್ನಲ್ಲಿರುವ ಗಾಲ್ಫ್ ಕೋರ್ಸ್ಸನಲ್ಲಿ ಆರತಕ್ಷತೆ ಆಯೋಜಿಸಲಾಗಿತ್ತು. ಆ ಕಾಲದ ಜನಪ್ರಿಯ ಕಲಾವಿದೆ ನುಸ್ರತ್ ಫತೇ ಅಲಿ ಖಾನ್ ಈ ವಿಶೇಷ ದಿನದಂದು ಪ್ರದರ್ಶನ ನೀಡಿದ್ದರು.