alex Certify ವಿದೇಶದಲ್ಲೂ ಅಭಿಮಾನಿ ಬಳಗ ಹೊಂದಿದ್ದ ಬಪ್ಪಿ ಲಹರಿ….! ರಷ್ಯಾದಲ್ಲಿ ಫೇಮಸ್ ಆಗಿದ್ದ ʼಜಿಮ್ಮಿ ಜಿಮ್ಮಿʼ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶದಲ್ಲೂ ಅಭಿಮಾನಿ ಬಳಗ ಹೊಂದಿದ್ದ ಬಪ್ಪಿ ಲಹರಿ….! ರಷ್ಯಾದಲ್ಲಿ ಫೇಮಸ್ ಆಗಿದ್ದ ʼಜಿಮ್ಮಿ ಜಿಮ್ಮಿʼ ಹಾಡು

ಜನಪ್ರಿಯ ಗಾಯಕ ಮತ್ತು ಸಂಗೀತ ಸಂಯೋಜಕ ಬಪ್ಪಿ ಲಹರಿ ಇಂದು ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಬಪ್ಪಿ ಲಹರಿ ತಮ್ಮ ನಾಲ್ಕು ದಶಕಗಳ ಕಾಲದ ವೃತ್ತಿ ಜೀವನದಲ್ಲಿ, ಸಂಗೀತ ಲೋಕಕ್ಕೆ ಮರೆಯದ ಹಾಡುಗಳ ಜೊತೆಗೆ ಸಾಕಷ್ಟು ಸೂಪರ್ ಹಿಟ್‌ಗಳನ್ನು ನೀಡಿದ್ದಾರೆ. ಅವುಗಳಲ್ಲಿ ಒಂದು ಜಿಮ್ಮಿ ಜಿಮ್ಮಿ ಹಾಡು.

ಈ ಹಾಡು ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಮಿಥುನ್ ಚಕ್ರವರ್ತಿ ಅಭಿನಯದ ಡಿಸ್ಕೋ ಡ್ಯಾನ್ಸರ್ ಚಿತ್ರದ ಈ ಹಾಡಿಗೆ ಈಗಲೂ ಅಭಿಮಾನಿಗಳು ಮೈ ಕುಣಿಸುತ್ತಾರೆ. ಜಿಮ್ಮಿ ಜಿಮ್ಮಿ ಹಾಡು ದಕ್ಷಿಣ ಮತ್ತು ಮಧ್ಯ ಏಷ್ಯಾ, ಪೂರ್ವ ಮತ್ತು ಪಶ್ಚಿಮ ಆಫ್ರಿಕಾ, ಮಿಡಲ್ ಈಸ್ಟ್, ಪೂರ್ವ ಏಷ್ಯಾ, ಟರ್ಕಿ ಮತ್ತು ಸೋವಿಯತ್ ಒಕ್ಕೂಟದಲ್ಲಿ ಸಖತ್ ಹಿಟ್ ಆಗಿತ್ತು.

ನಟಿಯ ಪ್ರಾಣ ಉಳಿಸಿದ ಏರ್‌ಬ್ಯಾಗ್….! ದೀಪ್ ಸಿಧು ಜೊತೆಗಿದ್ದ ರೀನಾ ರೈ ಬದುಕುಳಿದಿದ್ದೇ ಪವಾಡ

1982 ರಲ್ಲಿ ತೆರೆಕಂಡ ಚಲನಚಿತ್ರ ಡಿಸ್ಕೋ ಡ್ಯಾನ್ಸರ್‌ನಲ್ಲಿನ ಈ ಹಾಡನ್ನು ಬಪ್ಪಿ ಲಹರಿ ಸಂಯೋಜಿಸಿದ್ದಾರೆ. ಆ ಕಾಲದಲ್ಲೂ ಈ ಹಾಡು ಬಿಡುಗಡೆಯಾದ ಕೆಲ ದಿನಗಳಲ್ಲೆ ರಷ್ಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಯಿತು. ಇದರ ಮೂಲಕ ರಷ್ಯಾದಲ್ಲೂ ಬಪ್ಪಿ ಅವರ ಮ್ಯೂಸಿಕ್ ಗೆ ಸಾವಿರಾರು ಅಭಿಮಾನಿಗಳು, ಅನುಯಾಯಿಗಳು ಹುಟ್ಟಿಕೊಂಡರು.

ವಾಸ್ತವವಾಗಿ, ಈ ಹಾಡು ರಷ್ಯಾ ಮತ್ತು ಎಲ್ಲಾ ಯುರೇಷಿಯನ್ ದೇಶಗಳಲ್ಲಿ ಇಂದಿಗೂ ಜನಪ್ರಿಯವಾಗಿದೆ. ಡಿಸ್ಕೋ ಡ್ಯಾನ್ಸರ್‌ ಚಿತ್ರಕ್ಕೆ ಅಂತಾ ಕಾಲದಲ್ಲೂ ಬಪ್ಪಿ, ಪೆಪ್ಪಿ ಡಿಸ್ಕೋ ಟ್ರ್ಯಾಕ್‌ಗಳನ್ನ ನೀಡಿದ್ದರು. ಈಗಲೂ ಈ ಚಿತ್ರದ ಹಾಡುಗಳು ಎಲ್ಲೆಡೆ ಹಿಟ್ ಆಗಿವೆ. ಬಪ್ಪಿ ಲಹರಿಯವರು ಸಂಯೋಜಿಸಿದ ಇತರ ಡಿಸ್ಕೋ ಹಾಡುಗಳಲ್ಲಿ ಐ ಆಮ್ ಎ ಡಿಸ್ಕೋ ಡ್ಯಾನ್ಸರ್ ಮತ್ತು ಯಾದ್ ಆ ರಹಾ ಹೈ ಸೇರಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...