ರಾಯಚೂರಿನಲ್ಲಿ ವಿದ್ಯುತ್ ಗಾಗಿ ರೈತರು ಪ್ರತಿಭಟನೆ ನಡೆಸಿದ್ದು, ‘ಜೆಸ್ಕಾಂ ಕಚೇರಿ ಎದುರು ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ರೈತ ತಿಮ್ಮಪ್ಪ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಂತರ ಮಾತನಾಡಿದ ರೈತ ತಿಮ್ಮಪ್ಪ ‘ 12 ಗಂಟೆ ವಿದ್ಯುತ್ ಕೊಡುತ್ತೀನಿ ಅಂದಿದ್ದು, ಆದರೆ ನೀಡಿಲ್ಲ. ಈ ಹಿನ್ನಲೆ ಬಹಳ ಜನ ರೈತರು ಪ್ರತಿಭಟಿಸಿಲು ಬಂದಿದ್ದರು. ಆಗ ನಾನು ಬೇಸರಿಂದ ಕ್ರಿಮಿನಾಶಕ ಕುಡಿದೆ. ನಂತರ ವಾಂತಿ ಬೇಧಿ ಆಗಿದೆ. ಇದೀಗ ಎರಡು ಮಾತ್ರೆ ಸೇವಿಸಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದರು.