ಇಡೀ ದೇಶವೇ ದೀಪಾವಳಿ ಹಬ್ಬದ ಆಗಮನಕ್ಕಾಗಿ ಕಾಯುತ್ತಿದೆ. ಉತ್ತರ ಭಾರತದಲ್ಲಿ ಧನ್ತೇರಸ್ ಹಬ್ಬವನ್ನು ಸಹ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಶುಭ ಸಂದರ್ಭದಲ್ಲಿ ಫೋನ್ಪೇ 24 ಕ್ಯಾರೆಟ್ ಚಿನ್ನದ ಖರೀದಿ ಮೇಲೆ ಕ್ಯಾಶ್‌ಬ್ಯಾಕ್ ಘೋಷಣೆ ಮಾಡಿದೆ. ಫೋನ್ಪೇನಿಂದ ಕನಿಷ್ಟ 1000 ರೂಪಾಯಿ ಮೌಲ್ಯದ ಚಿನ್ನ ಖರೀದಿ ಮಾಡುವ ಗ್ರಾಹಕರು 3000 ರೂಪಾಯಿಗಳವರೆಗೆ ಗ್ಯಾರಂಟಿ ಕ್ಯಾಶ್‌ಬ್ಯಾಕ್ ಪಡೆಯಲಿದ್ದಾರೆ.
ನವೆಂಬರ್ 9ರಿಂದ 12ರವರೆಗೆ ನೀವು ಕನಿಷ್ಟ 1 ಸಾವಿರ ರೂಪಾಯಿ ಮೌಲ್ಯದ ಡಿಜಿಟಲ್ ಚಿನ್ನವನ್ನು ಖರೀದಿ ಮಾಡಬಹುದಾಗಿದೆ. ಪ್ರತಿ ಬಾರಿ ನೀವು ಚಿನ್ನ ಖರೀದಿ ಮಾಡಿದಾಗಲೂ ನಿಮಗೆ ಈ ಆಫರ್ ಬಳಕೆ ಮಾಡುವ ಅವಕಾಶ ಪಡೆದುಕೊಳ್ಳಲಿದ್ದೀರಿ. ಬ್ಯಾಂಕ್ ದರ್ಜೆಯ ಲಾಕರ್ಗಳು ಐದು ವರ್ಷಗಳವರೆಗೆ ಉಚಿತವಾಗಿ ಇರಲಿದೆ.
PhonePe ನಲ್ಲಿ ಚಿನ್ನವನ್ನು ಖರೀದಿಸುವಾಗ ಈ ವಿಶೇಷ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಪಡೆಯುವ ಮಾರ್ಗ ಇಲ್ಲಿದೆ :
ಹಂತ 1 : ಫೋನ್ಪೇ ಆ್ಯಪ್ನ ಹೋಮ್ಪೇಜ್ನಲ್ಲಿರುವ ವೆಲ್ತ್ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 2 : ವೆಲ್ತ್ ಪರದೆಯ ಮೇಲೆ ಇರುವ ಗೋಲ್ಡ್ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 3 : ಬೈ ವನ್ ಟೈಂ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 4 : ಬೈ ಇನ್ ರುಪೀಸ್ ಆಯ್ಕೆಯನ್ನು ಕ್ಲಿಕ್ ಮಾಡಿ. ಹಾಗೂ ಇಲ್ಲಿ ನೀವು ಕನಿಷ್ಟ 1000 ರೂಪಾಯಿಯನ್ನು ವಿನಿಯೋಗಿಸಲೇಬೇಕು.
ಹಂತ 5 : ನಿಮ್ಮ ಪೇಮೆಂಟ್ ಪ್ರಕ್ರಿಯೆ ಪೂರ್ಣಗೊಳಿಸಿ.
ಝೀರೋ ಮೇಕಿಂಗ್ ಚಾರ್ಜಸ್ ಮೂಲಕ ನೀವು 24 ಕ್ಯಾರಟ್ ಚಿನ್ನವನ್ನು ಖರೀದಿ ಮಾಡಬಹುದಾಗಿದೆ. ಹಾಗೂ ಈ ಪೇಮೆಂಟ್ ಬಳಿಕ ನೀವು ಕ್ಯಾಶ್‌ಬ್ಯಾಕ್ ಸೌಕರ್ಯ ಪಡೆಯಲಿದ್ದೀರಿ.