alex Certify ‘ಗೋಮಿ ಗೋಮಿ’ ಹಾಡಿಗೆ ಹೆಜ್ಜೆ ಹಾಕಿದ ಧನಶ್ರೀ ವರ್ಮಾ: ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗೋಮಿ ಗೋಮಿ’ ಹಾಡಿಗೆ ಹೆಜ್ಜೆ ಹಾಕಿದ ಧನಶ್ರೀ ವರ್ಮಾ: ನೆಟ್ಟಿಗರು ಫಿದಾ

ನೀವು ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟಿವ್​​ ಇರುವ ಪೈಕಿಯವರಾದರೆ ನಿಮಗೆ ಸಧ್ಯ ಇನ್​ಸ್ಟಾಗ್ರಾಂ ರೀಲ್ಸ್​ನಲ್ಲಿ ವೈರಲ್​ ಆಗುತ್ತಿರುವ ಗೋಮಿ ಗೋಮಿ ಹಾಡಿನ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಈ ಹಾಡಿಗೆ ಹೆಜ್ಜೆ ಹಾಕುವ ಟ್ರೆಂಡ್​ ಈಗ ಜೋರಾಗಿದೆ. ಧನಶ್ರೀ ವರ್ಮಾ ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದು ಸಖತ್​ ವೈರಲ್​ ಆಗಿದೆ.

ಇನ್​ಸ್ಟಾಗ್ರಾಂ ನಲ್ಲಿ ಧನಶ್ರೀ ಈ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ. ಅತ್ಯಂತ ಸುಂದರವಾದ ಸ್ಥಳದಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಈ ಅರೆಬಿಕ್​ ಹಾಡಿಗೆ ಧನಶ್ರೀ ವರ್ಮಾ ಹಾಕಿದ ಹೆಜ್ಜೆ ನೋಡುಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ವಿಡಿಯೋಗೆ ಧನಶ್ರೀ ನಾನು ಈ ವಿಡಿಯೋವನ್ನ ನನ್ನ ಮೊಬೈಲ್​ನ ಡ್ರಾಫ್ಟ್​ನಲ್ಲಿ ನೋಡಿದೆ ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋ 3 ಮಿಲಿಯನ್​ಗೂ ಅಧಿಕ ವೀವ್ಸ್​ ಸಂಪಾದಿಸಿದೆ, ನೆಟ್ಟಿಗರು ಕೂಡ ಧನಶ್ರೀ ನೃತ್ಯವನ್ನು ಹಾಡಿ ಹೊಗಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...