ಖಿಲ್ಖೇತ ಪ್ರದೇಶದಿಂದ ಭಾರತೀಯ ನಕಲಿ ಕರೆನ್ಸಿ ನೋಟುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಓರ್ವ ಪುರುಷ ಹಾಗೂ ಮಹಿಳೆಯನ್ನು ಬಾಂಗ್ಲಾದೇಶದ ಢಾಕಾ ಮೆಟ್ರೋಪಾಲಿಟನ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಫಾತಿಮಾ ಅಖ್ತರ್ ಒಪಿ ಎಂದು ಗುರುತಿಸಲಾಗಿದೆ. ಬಂಧಿತರಿಂದ ಪೊಲೀಸರು 7 ಕೋಟಿ ರೂಪಾಯಿ ಮೌಲ್ಯದ ನಕಲಿ ಕರೆನ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ನಕಲಿ ಕರೆನ್ಸಿಗಳು ಪಾಕಿಸ್ತಾನದಿಂದ ಬಂದಿವೆ ಎನ್ನಲಾಗಿದೆ. ದಕ್ಷಿಣ ಖಾನ್ ಪ್ರದೇಶದ ಮನೆಯೊಂದರಿಂದ ಈ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿಎಂಪಿ ಮುಂದುವರಿದ ತನಿಖೆಯ ಭಾಗವಾಗಿ ಡೆಮ್ರಾದ ಸರುಲಿಯಾ ಪ್ರದೇಶದ ಅಬು ತಾಲೇಬ್ ಎಂಬಾತನನ್ನು ಬಂಧಿಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿಗಳಲ್ಲಿ ಓರ್ವನಾದ ಅಬು ತಾಲೆಬ್ ಪಾಕ್ನ ಪ್ರಜೆಗಳಾದ ಸುಲ್ತಾನ್ ಹಾಗೂ ಶಫಿ ಎಂಬವರ ಸಹಾಯದಿಂದ ಪಾಕಿಸ್ತಾನದಿಂದ ಶ್ರೀಲಂಕಾ ಮೂಲಕ ನಕಲಿ ನೋಟುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ. ಈ ನಕಲಿ ನೋಟುಗಳನ್ನು ಅಬು ತಾಲೆಬ್ ಫಾತಿಮಾ ಅಖ್ತರ್ ನವೆಂಬರ್ 23ಕ್ಕೆ ನೀಡಿದ್ದನು.