alex Certify Big News: ಬಾಂಗ್ಲಾದೇಶದ ಮೂಲಕ ಭಾರತಕ್ಕೆ ಸಾಗಿಸುತ್ತಿದ್ದ ಬರೋಬ್ಬರಿ 7 ಕೋಟಿ ರೂ.ಮೌಲ್ಯದ ನಕಲಿ ನೋಟು ವಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Big News: ಬಾಂಗ್ಲಾದೇಶದ ಮೂಲಕ ಭಾರತಕ್ಕೆ ಸಾಗಿಸುತ್ತಿದ್ದ ಬರೋಬ್ಬರಿ 7 ಕೋಟಿ ರೂ.ಮೌಲ್ಯದ ನಕಲಿ ನೋಟು ವಶ

ಖಿಲ್ಖೇತ ಪ್ರದೇಶದಿಂದ ಭಾರತೀಯ ನಕಲಿ ಕರೆನ್ಸಿ ನೋಟುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಓರ್ವ ಪುರುಷ ಹಾಗೂ ಮಹಿಳೆಯನ್ನು ಬಾಂಗ್ಲಾದೇಶದ ಢಾಕಾ ಮೆಟ್ರೋಪಾಲಿಟನ್​ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಫಾತಿಮಾ ಅಖ್ತರ್​ ಒಪಿ ಎಂದು ಗುರುತಿಸಲಾಗಿದೆ. ಬಂಧಿತರಿಂದ ಪೊಲೀಸರು 7 ಕೋಟಿ ರೂಪಾಯಿ ಮೌಲ್ಯದ ನಕಲಿ ಕರೆನ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ನಕಲಿ ಕರೆನ್ಸಿಗಳು ಪಾಕಿಸ್ತಾನದಿಂದ ಬಂದಿವೆ ಎನ್ನಲಾಗಿದೆ. ದಕ್ಷಿಣ ಖಾನ್​ ಪ್ರದೇಶದ ಮನೆಯೊಂದರಿಂದ ಈ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿಎಂಪಿ ಮುಂದುವರಿದ ತನಿಖೆಯ ಭಾಗವಾಗಿ ಡೆಮ್ರಾದ ಸರುಲಿಯಾ ಪ್ರದೇಶದ ಅಬು ತಾಲೇಬ್​​ ಎಂಬಾತನನ್ನು ಬಂಧಿಸಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಆರೋಪಿಗಳಲ್ಲಿ ಓರ್ವನಾದ ಅಬು ತಾಲೆಬ್​​ ಪಾಕ್​ನ ಪ್ರಜೆಗಳಾದ ಸುಲ್ತಾನ್​ ಹಾಗೂ ಶಫಿ ಎಂಬವರ ಸಹಾಯದಿಂದ ಪಾಕಿಸ್ತಾನದಿಂದ ಶ್ರೀಲಂಕಾ ಮೂಲಕ ನಕಲಿ ನೋಟುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ. ಈ ನಕಲಿ ನೋಟುಗಳನ್ನು ಅಬು ತಾಲೆಬ್​ ಫಾತಿಮಾ ಅಖ್ತರ್​ ನವೆಂಬರ್​ 23ಕ್ಕೆ ನೀಡಿದ್ದನು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...