alex Certify ಮಹಿಳಾ ಮಾಡೆಲ್ ಗಳನ್ನು ಚುಂಬಿಸುವ ಫೋಟೋ ಶೂಟ್​ ತಡೆದ ನನ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳಾ ಮಾಡೆಲ್ ಗಳನ್ನು ಚುಂಬಿಸುವ ಫೋಟೋ ಶೂಟ್​ ತಡೆದ ನನ್…!

ಮಹಿಳಾ ಮಾಡೆಲ್​ಗಳಿಬ್ಬರು ಚುಂಬಿಸುವ ಫೋಟೋ ಶೂಟ್​ಗೆ ಕ್ರೈಸ್ತ ಸನ್ಯಾಸಿನಿಯೊಬ್ಬರು ಅಡ್ಡಿಪಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇಟಲಿಯ ನೇಪಲ್ಸ್​ನ ಸ್ಪ್ಯಾನಿಷ್​ ಕ್ವಾರ್ಟರ್​ನಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಮಾಡೆಲ್​ಗಳಾದ ಸೆರೆನಾ ಡಿ ಫೆರಾರಿ ಮತ್ತು ಕಿಶನ್​ ವಿಲ್ಸನ್​ ಬೀದಿಯಲ್ಲಿ ಪರಸ್ಪರ ಚುಂಬಿಸುತ್ತಿದ್ದರು. ಕುತೂಹಲಕಾರಿ ಸಂಗತಿ ಎಂದರೆ ಮಹಿಳೆಯರು ತಮ್ಮ ವಾಂಛೆಗಾಗಿ ಚುಂಬಿಸುತ್ತಿರಲಿಲ್ಲ. ಬದಲಿಗೆ ಮ್ಯಾಗಜೀನ್​ಗಾಗಿ ಫೋಟೋ ಶೂಟ್​ಗೆ ಪೋಸ್​ ನೀಡುತ್ತಿದ್ದರು.

ಸ್ಥಳದಲ್ಲಿ ಕ್ಯಾಮರಾಗಳು ಮತ್ತು ಪ್ರೊಡಕ್ಷನ್​ ತಂಡ ಇದ್ದಾಗಿಯೂ ಇದನ್ನು ಪರಿಗಣಿಸದೇ ಕ್ಯಾಥೋಲಿಕ್​ ಸನ್ಯಾಸಿನಿ, ಚುಂಬಿಸುತ್ತಿರುವ ದೃಶ್ಯ ನೋಡಿ ಅಸಮಾಧಾನ ಹೊರಹಾಕಲು ಆರಂಭಿಸಿದರು. ಮೊದಲು ಇಬ್ಬರನ್ನೂ ಬೇರ್ಪಡಿಸಿದ ನಂತರ, ಅವರ ಕಾರ್ಯಗಳಿಗಾಗಿ ಅವರನ್ನು ಗದರಿದ್ದಾರೆ. ಇಟಾಲಿಯನ್​ ಭಾಷೆಯಲ್ಲಿ ಕೆಲವು ಪ್ರಾರ್ಥನೆಗಳನ್ನು ಗುನುಗಿದರು.

ಫಾರ್ಮ್‌ ನಲ್ಲಿಲ್ಲದೇ ಇದ್ರೂ ಅಭಿಮಾನಿಗಳ ಪಾಲಿಗೆ ಕಿಂಗ್, ಪ್ರತಿ ಇನ್‌ಸ್ಟಾ ಪೋಸ್ಟ್‌ಗೆ 8 ಕೋಟಿ ಗಳಿಸ್ತಾರೆ ಕೊಹ್ಲಿ

ವಯೋವೃದ್ಧ ಸನ್ಯಾಸಿನಿಯ ವಯಸ್ಸನ್ನು ಗೌರವಿಸಿ ಅವರ ಧಾರ್ಮಿಕ ನಂಬಿಕೆಗಳನ್ನು ಗೌರವಿಸಿ ಇಬ್ಬರು ನಟಿಯರು ಏನನ್ನೂ ಹೇಳದೆ ನಕ್ಕಿದ್ದಾರೆ. ನಾಟ್​ ಯೆಟ್​ ಮ್ಯಾಗಜೀನ್​ನ ಇನ್​ಸ್ಟಾಗ್ರಾಮ್​ ಹ್ಯಾಂಡಲ್​ ಈ ಘಟನೆಯ ವಿಡಿಯೊವನ್ನು ಹಂಚಿಕೊಂಡಿದೆ.

ನಾವು ಕ್ವಾಟಿರ್ಯರಿ ಸ್ಪಾಗ್ನೋಲಿಯಲ್ಲಿ, ಅಲ್ಲೆಯಲ್ಲಿ, ಮೇರ್​ ಫ್ಯೂರಿಯ ಇಬ್ಬರು ಮುಖ್ಯಪಾತ್ರಗಳನ್ನು ಮಾಡೆಲ್​ಗಳಾಗಿ ಮ್ಯಾಗಜೀನ್ಗಾಗಿ ಶೂಟ್​ ಮಾಡುತ್ತಿದ್ದೆವು. ಇದ್ದಕ್ಕಿದ್ದಂತೆ ಒಬ್ಬ ಸನ್ಯಾಸಿನಿ ಬಂದು ನಾವು ಬೆಳಿಗ್ಗೆ ಸಾಮೂಹಿಕವಾಗಿ ಹೋಗುತ್ತೇವೆಯೇ ಎಂದು ಪ್ರಶ್ನಿಸಿದರು. ಹಾಗೆಯೇ ಕೋವಿಡ್​ ವೈರಲ್​ ಹರಡಲು ಯುವ ಪೀಳಿಗೆ ಕಾರಣ ಎಂದೂ ದೂಷಿಸಿದರು. ಇಬ್ಬರು ಮಾಡೆಲ್​ಗಳು ಚುಂಬಿಸುತ್ತಿರುವುದನ್ನು ಗಮನಿಸಿ ಮಧ್ಯಪ್ರವೇಶಿಸಲು ಮುಂದಾದರು ಎಂದು ಪ್ರೊಡಕ್ಷನ್​ ತಂಡದ ಸದಸ್ಯರು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...