ಮಹಿಳಾ ಮಾಡೆಲ್ಗಳಿಬ್ಬರು ಚುಂಬಿಸುವ ಫೋಟೋ ಶೂಟ್ಗೆ ಕ್ರೈಸ್ತ ಸನ್ಯಾಸಿನಿಯೊಬ್ಬರು ಅಡ್ಡಿಪಡಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಟಲಿಯ ನೇಪಲ್ಸ್ನ ಸ್ಪ್ಯಾನಿಷ್ ಕ್ವಾರ್ಟರ್ನಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಮಾಡೆಲ್ಗಳಾದ ಸೆರೆನಾ ಡಿ ಫೆರಾರಿ ಮತ್ತು ಕಿಶನ್ ವಿಲ್ಸನ್ ಬೀದಿಯಲ್ಲಿ ಪರಸ್ಪರ ಚುಂಬಿಸುತ್ತಿದ್ದರು. ಕುತೂಹಲಕಾರಿ ಸಂಗತಿ ಎಂದರೆ ಮಹಿಳೆಯರು ತಮ್ಮ ವಾಂಛೆಗಾಗಿ ಚುಂಬಿಸುತ್ತಿರಲಿಲ್ಲ. ಬದಲಿಗೆ ಮ್ಯಾಗಜೀನ್ಗಾಗಿ ಫೋಟೋ ಶೂಟ್ಗೆ ಪೋಸ್ ನೀಡುತ್ತಿದ್ದರು.
ಸ್ಥಳದಲ್ಲಿ ಕ್ಯಾಮರಾಗಳು ಮತ್ತು ಪ್ರೊಡಕ್ಷನ್ ತಂಡ ಇದ್ದಾಗಿಯೂ ಇದನ್ನು ಪರಿಗಣಿಸದೇ ಕ್ಯಾಥೋಲಿಕ್ ಸನ್ಯಾಸಿನಿ, ಚುಂಬಿಸುತ್ತಿರುವ ದೃಶ್ಯ ನೋಡಿ ಅಸಮಾಧಾನ ಹೊರಹಾಕಲು ಆರಂಭಿಸಿದರು. ಮೊದಲು ಇಬ್ಬರನ್ನೂ ಬೇರ್ಪಡಿಸಿದ ನಂತರ, ಅವರ ಕಾರ್ಯಗಳಿಗಾಗಿ ಅವರನ್ನು ಗದರಿದ್ದಾರೆ. ಇಟಾಲಿಯನ್ ಭಾಷೆಯಲ್ಲಿ ಕೆಲವು ಪ್ರಾರ್ಥನೆಗಳನ್ನು ಗುನುಗಿದರು.
ಫಾರ್ಮ್ ನಲ್ಲಿಲ್ಲದೇ ಇದ್ರೂ ಅಭಿಮಾನಿಗಳ ಪಾಲಿಗೆ ಕಿಂಗ್, ಪ್ರತಿ ಇನ್ಸ್ಟಾ ಪೋಸ್ಟ್ಗೆ 8 ಕೋಟಿ ಗಳಿಸ್ತಾರೆ ಕೊಹ್ಲಿ
ವಯೋವೃದ್ಧ ಸನ್ಯಾಸಿನಿಯ ವಯಸ್ಸನ್ನು ಗೌರವಿಸಿ ಅವರ ಧಾರ್ಮಿಕ ನಂಬಿಕೆಗಳನ್ನು ಗೌರವಿಸಿ ಇಬ್ಬರು ನಟಿಯರು ಏನನ್ನೂ ಹೇಳದೆ ನಕ್ಕಿದ್ದಾರೆ. ನಾಟ್ ಯೆಟ್ ಮ್ಯಾಗಜೀನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ ಈ ಘಟನೆಯ ವಿಡಿಯೊವನ್ನು ಹಂಚಿಕೊಂಡಿದೆ.
ನಾವು ಕ್ವಾಟಿರ್ಯರಿ ಸ್ಪಾಗ್ನೋಲಿಯಲ್ಲಿ, ಅಲ್ಲೆಯಲ್ಲಿ, ಮೇರ್ ಫ್ಯೂರಿಯ ಇಬ್ಬರು ಮುಖ್ಯಪಾತ್ರಗಳನ್ನು ಮಾಡೆಲ್ಗಳಾಗಿ ಮ್ಯಾಗಜೀನ್ಗಾಗಿ ಶೂಟ್ ಮಾಡುತ್ತಿದ್ದೆವು. ಇದ್ದಕ್ಕಿದ್ದಂತೆ ಒಬ್ಬ ಸನ್ಯಾಸಿನಿ ಬಂದು ನಾವು ಬೆಳಿಗ್ಗೆ ಸಾಮೂಹಿಕವಾಗಿ ಹೋಗುತ್ತೇವೆಯೇ ಎಂದು ಪ್ರಶ್ನಿಸಿದರು. ಹಾಗೆಯೇ ಕೋವಿಡ್ ವೈರಲ್ ಹರಡಲು ಯುವ ಪೀಳಿಗೆ ಕಾರಣ ಎಂದೂ ದೂಷಿಸಿದರು. ಇಬ್ಬರು ಮಾಡೆಲ್ಗಳು ಚುಂಬಿಸುತ್ತಿರುವುದನ್ನು ಗಮನಿಸಿ ಮಧ್ಯಪ್ರವೇಶಿಸಲು ಮುಂದಾದರು ಎಂದು ಪ್ರೊಡಕ್ಷನ್ ತಂಡದ ಸದಸ್ಯರು ಹೇಳಿಕೊಂಡಿದ್ದಾರೆ.