
ಇನ್‌ಸ್ಟಾಗ್ರಾಂ ಮೀಮ್ ಪೇಜ್ ಒಂದರಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ, ಹಾಡಹಗಲೇ ಬಲು ಕೂಲಾಗಿ ಮನೆಯ ಗೇಟು ತೆರೆದು ಅಂಗಳದೊಳಗೆ ಕಾಲಿಟ್ಟ ಕಳ್ಳ ವೆರಾಂಡಾ ಬಳಿ ನಿಲ್ಲಿಸಿದ್ದ ಬೈಸಿಕಲ್ ಮತ್ತು ಬೈಕ್‌ನತ್ತ ಹೆಜ್ಜೆಯಿಟ್ಟಿದ್ದಾನೆ. ಬೈಸಿಕಲ್ ಅನ್ನು ಕೈಯಲ್ಲಿ ಹಿಡಿದು ಗೇಟಿನತ್ತ ಸಾಗಿದ ಕಳ್ಳ ಮಾಲೀಕನ ಕಣ್ಣಿಗೆ ಬಿದ್ದಿದ್ದಾನೆ.
ಮಾಲೀಕ ಕೂಡಲೇ ಆತನನ್ನು ಚೇಸ್ ಮಾಡಿದ್ದಾರೆ. ಇದರಿಂದ ಮುಂದಿನದ್ದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ. ಕಳ್ಳನನ್ನು ಮಾಲೀಕ ಬೆನ್ನಟ್ಟಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.
ಈ ದೃಶ್ಯಕ್ಕೆ ಫನ್ನಿಯಾಗಿ ಕಾಣುವಂತೆ ಎಡಿಟಿಂಗ್ ಮಾಡಿ ಮೀಮ್ ಮಾಡಿ ಶೇರ್ ಮಾಡಲಾಗಿದೆ. ವಿಡಿಯೋ ದೇಶದ ಯಾವ ಮೂಲೆಯಲ್ಲಿ ರೆಕಾರ್ಡ್ ಆಗಿದೆ ಎಂದು ತಿಳಿದುಬಂದಿಲ್ಲ.