ಕೊರೊನಾ ಸಾಂಕ್ರಾಮಿಕದಿಂದಾಗಿ ಪ್ರತಿಯೊಬ್ಬರ ಜೀವನದಲ್ಲೂ ಅನೇಕ ಬದಲಾವಣೆಗಳು ಆಗಿದೆ.
ಈ ನಡುವೆ ಮಾನವೀಯತೆ, ದಯಾಗುಣಗಳಿಗೆ ಕೈಗನ್ನಡಿ ಎಂಬಂತಹ ಕತೆಗಳು ಸಹ ಬೆಳಕಿಗೆ ಬರ್ತಾನೇ ಇದೆ. ಇದೇ ರೀತಿಯ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬರು ತಾವು ಹೇಗೆ ಮನೆಗೆಲಸದಾಕೆ ತನ್ನ ಪುತ್ರಿಗೆ ಲ್ಯಾಪ್ಟಾಪ್ ಕೊಡಿಸುವಲ್ಲಿ ನೆರವಾದೆವು ಅನ್ನೋದನ್ನ ವಿವರಿಸಿದ್ದು ಈ ಕತೆ ಓದಿದ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ.
ಸರಣಿ ಟ್ವೀಟ್ಗಳ ಮೂಲಕ ಗೌರವ್ ಎಂಬವರು ಈ ಕತೆಯನ್ನ ವಿವರಿಸಿದ್ದಾರೆ. ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮನೆಗೆಲಸದಾಕೆ ಒಮ್ಮೆ ಸ್ವಲ್ಪ ಹಣವನ್ನ ಹಿಡಿದುಕೊಂಡು ಬಂದು ತಮ್ಮ ಮಗಳಿಗೆ ಲ್ಯಾಪ್ಟಾಪ್ ಖರೀದಿ ಮಾಡಲು ಸಹಾಯ ಮಾಡಿ ಎಂದು ಕೇಳಿದ್ದರು. ಈಕೆಯ ಪುತ್ರಿ ಏರ್ ಹೋಸ್ಟ್ ತರಗತಿಗೆ ಹಾಜರಾಗಬೇಕಾದ್ದರಿಂದ ಲ್ಯಾಪ್ ಟಾಪ್ ಖರೀದಿ ಮಾಡೋದು ಅನಿವಾರ್ಯವಾಗಿತ್ತು.
ಆದರೆ ಮನೆಗೆಲಸದಾಕೆ ಕೂಡಿಟ್ಟ ಹಣಕ್ಕಿಂತ ಹೆಚ್ಚಿನ ಮೊತ್ತ ಲ್ಯಾಪ್ಟಾಪ್ ಖರೀದಿಗೆ ಬೇಕಾಗಿತ್ತು. ಮನೆಗೆಲಸದಾಕೆಯ ಕಷ್ಟಕ್ಕೆ ನೆರವಾದ ಗೌರವ್ ಹೆಚ್ಚಿನ ಹಣವನ್ನ ತಾವೇ ನೀಡಿ ಲ್ಯಾಪ್ಟಾಪ್ ಖರೀದಿಸಿಕೊಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಮನೆಗೆಲಸದಾಕೆ ಪ್ರತಿ ತಿಂಗಳು ನನ್ನ ಸಂಬಳದಲ್ಲಿ 1 ಸಾವಿರ ರೂಪಾಯಿ ಕಡಿತ ಮಾಡಿಕೊಳ್ಳಿ ಎಂದು ಹೇಳಿದ್ದರು. ಆದರೆ ಇದಕ್ಕೆ ಗೌರವ್ ಒಪ್ಪಿಗೆ ನೀಡದೇ ಮಾನವೀಯತೆ ಮೆರೆದಿದ್ದಾರೆ.
https://twitter.com/gaurav_0112/status/1409418076563468290
https://twitter.com/gaurav_0112/status/1409418076563468290