alex Certify ಹಾಳಾದ ಐಷಾರಾಮಿ ಕಾರು: ಕಾಲಿನಿಂದ ತಳ್ಳಿಕೊಂಡು ಹೋದ ಆಟೋ ಚಾಲಕ – ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಳಾದ ಐಷಾರಾಮಿ ಕಾರು: ಕಾಲಿನಿಂದ ತಳ್ಳಿಕೊಂಡು ಹೋದ ಆಟೋ ಚಾಲಕ – ವಿಡಿಯೋ ವೈರಲ್

ಭಾರತೀಯರು ತಮ್ಮ ಜುಗಾಡ್​ಗಳಿಗೆ ಹೆಸರುವಾಸಿಯಾಗಿದ್ದಾರೆ, ಅದು ಅವರ ಆಸೆಯನ್ನು ಜೀವಂತವಾಗಿರಿಸುತ್ತದೆ. ಟೂತ್‌ಪೇಸ್ಟ್ ಟ್ಯೂಬ್ ಅನ್ನು ಅರ್ಧಕ್ಕೆ ಕತ್ತರಿಸುವುದು, ಮನೆಯನ್ನು ಸ್ವಚ್ಛಗೊಳಿಸಲು, ಹಳೆಯ ಬಟ್ಟೆಗಳನ್ನು ಮಾಪ್ ಆಗಿ ಮರುಬಳಕೆ ಮಾಡುವುದು……. ಹೀಗೆ ಪಟ್ಟಿ ಬೆಳೆಯುತ್ತದೆ.

ಆದರೆ, ಮರ್ಸಿಡಿಸ್ ಬೆಂಝ್ ಕಾರು ರಸ್ತೆಯ ಮಧ್ಯದಲ್ಲಿ ಸಿಲುಕಿಕೊಂಡಾಗ ಆಟೋ ಚಾಲಕನು ತನ್ನ ಕಾಲಿನಿಂದ ದುಬಾರಿ ಕಾರನ್ನು ತಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ದೇಸಿ ಜುಗಾಡ್​ ಎಂದು ನೆಟ್ಟಿಗರು ನಗುತ್ತಿದ್ದಾರೆ.

ಪುಣೆಯ ಜನನಿಬಿಡ ರಸ್ತೆಗಳಲ್ಲಿ ಆಟೋ ರಿಕ್ಷಾ ಚಾಲಕನೊಬ್ಬ ತನ್ನ ಎಡಗಾಲನ್ನು ಕಾರಿನ ಬಂಪರ್ ಮೇಲೆ ಇಟ್ಟು ಕೆಂಪು ಬಣ್ಣದ ಮರ್ಸಿಡಿಸ್ ಬೆಂಝ್ ಸಿಎಲ್‌ಎ ಐಷಾರಾಮಿ ವಾಹನವನ್ನು ತಳ್ಳುತ್ತಿರುವುದನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಘಟನೆಯು ಪುಣೆಯ ಕೋರೆಗಾಂವ್ ಪಾರ್ಕ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಈ ಘಟನೆಯನ್ನು ರಸ್ತೆಯಲ್ಲಿ ಇನ್ನೊಬ್ಬ ಸವಾರ ಸೆರೆಹಿಡಿದಿದ್ದಾರೆ. 10-ಸೆಕೆಂಡ್‌ಗಳ ವೀಡಿಯೊ ನೋಡಿ ನೆಟ್ಟಿಗರು ನಕ್ಕೂ ನಕ್ಕೂ ಸುಸ್ತಾಗುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...