ಐ ಫೋನ್ಗಳ ದರ ದುಬಾರಿಯಾಗಿದ್ದರೂ ಸಹ ತಮ್ಮ ಅತ್ಯಾಧುನಿಕ ಸೌಲಭ್ಯಗಳ ಮೂಲಕ ಗ್ರಾಹಕರನ್ನ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತೆ. ಅದರಲ್ಲೂ ಆಪಲ್ನ ಫೇಸ್ ಐಡಿ ಆಯ್ಕೆ ಅತ್ಯಂತ ಜನಪ್ರಿಯ ಸೌಲಭ್ಯಗಳಲ್ಲಿ ಒಂದು.
ಈ ಫೇಸ್ ಐಡಿ ಆಯ್ಕೆಯನ್ನ 2017ರಲ್ಲಿ ಮೊಟ್ಟ ಮೊದಲ ಬಾರಿಗೆ ಆಪಲ್ ಎಕ್ಸ್ ಮೊಬೈಲ್ನಲ್ಲಿ ಪರಿಚಯಿಸಲಾಯ್ತು. ಆಪಲ್ನ ಈ ಫೇಸ್ ಐಡಿ ಜನಪ್ರಿಯತೆಗೆ ಜೊತೆಗೆ ಎಷ್ಟೋ ಬಾರಿ ಅನೇಕ ದೂರುಗಳನ್ನೂ ಸ್ವೀಕರಿಸಿದೆ. ಇದೀಗ ಫೇಸ್ಬುಕ್ನಲ್ಲಿ ಫೇಸ್ ಐಡಿ ಸುರಕ್ಷತೆಯನ್ನ ಪ್ರಶ್ನೆ ಮಾಡುವಂತಹ ಇನ್ನೊಂದು ವಿಡಿಯೋ ವೈರಲ್ ಆಗಿದೆ.
ವಿನಮ್ರೆ ಸೂದ್ ಎಂಬ ಹೆಸರಿನ ವ್ಯಕ್ತಿ ಹೊಸದಾಗಿ ಖರೀದಿ ಮಾಡಿದ ಐ ಫೋನ್ 12 ಮಿನಿ ಮೊಬೈಲ್ನ್ನು ಫೇಸ್ ಐಡಿ ಬಳಸಿ ಅನ್ಲಾಕ್ ಮಾಡಿದ್ದಾರೆ. ಬಳಿಕ ಈ ಮೊಬೈಲ್ನ್ನು ತಮ್ಮ ಸಹೋದರ ಉಪಾಂಶುಗೆ ನೀಡಿದ್ದಾರೆ.
ವಿಚಿತ್ರ ಅಂದ್ರೆ ಉಪಾಂಶು ಮುಖವನ್ನ ಮೊಬೈಲ್ ಮುಂದೆ ಹಿಡಿದರೂ ಸಹ ಮೊಬೈಲ್ ಅನ್ಲಾಕ್ ಆಗಿದೆ. ಅಂದಹಾಗೆ ಇವರಿಬ್ಬರೂ ಅವಳಿ ಜವಳಿ ಅಲ್ಲ, ತದ್ರೂಪಿಯೂ ಅಲ್ಲ. ಆದರೂ ಸಹ ಇವರ ಮುಖವನ್ನ ಗುರುತಿಸುವಲ್ಲಿ ಐ ಫೋನ್ ವಿಫಲವಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
https://www.facebook.com/vinamre.sood/videos/4482843695061907/?t=120