ಅಪ್ಪ-ಮಗಳ ಬಾಂಧವ್ಯ ಬಹಳ ಆಳವಾದದ್ದು. ಅದರಲ್ಲೂ ಭಾರೀ ಹಚ್ಚಿಕೊಂಡ ಅಪ್ಪ ಮದುವೆಯ ಸಮಯದಲ್ಲಿ ಇಲ್ಲವಾದಲ್ಲಿ ಹೆಣ್ಣುಮಕ್ಕಳಿಗೆ ಆ ಅನುಪಸ್ಥಿತಿ ಕಾಡುತ್ತಿರುತ್ತದೆ.
ಕಳೆದ ವರ್ಷ ಕ್ಯಾನ್ಸರ್ ಕಾರಣದಿಂದ ಅಪ್ಪನನ್ನು ಕಳೆದುಕೊಂಡ ಮದುಮಗಳು ಸುವನ್ಯಾ, ಮುದ್ದಿನ ಅಪ್ಪ ಬರೆದಿದ್ದ ಪತ್ರವೊಂದರ ಮೇಲಿದ್ದ ಪದಗಳನ್ನು ತನ್ನ ಮದುವೆ ಬಟ್ಟೆಯ ಮೇಲೆ ಎಂಬ್ರಾಯ್ಡರಿ ಮಾಡಿಸಿಕೊಂಡಿದ್ದಾರೆ.
ಆಧಾರ್ ಹೊಂದಿದ ರೈತರಿಗೆ ಮತ್ತೊಂದು ಗುಡ್ ನ್ಯೂಸ್: ಖಾತೆಗೆ ಬೆಳೆ ಹಾನಿ ಪರಿಹಾರ ಜಮಾ
ರಾಜಸ್ಥಾನದ ಖಿಮ್ಸಾರ್ ಕೋಟೆಯಲ್ಲಿ ಅಮಾನ್ ಕಾಲ್ರಾ ಎಂಬ ವ್ಯಕ್ತಿಯೊಂದಿಗೆ ಹಸೆಮಣೆ ಏರಿದ ಸುವನ್ಯಾ, ತಮ್ಮ ಮದುವೆ ಸಮಾರಂಭವನ್ನು ಅಪ್ಪನ ವಿಶೇಷ ಸ್ಮರಣೆಯೊಂದಿಗೆ ಇನ್ನಷ್ಟು ಸ್ಪೆಷಲ್ ಆಗುವಂತೆ ಮಾಡಿದ್ದಾರೆ.
https://www.instagram.com/p/CYI42SjJcs-/?utm_source=ig_web_button_share_sheet