alex Certify ಸಿನಿಮಾ ನಟಿಯರನ್ನೂ ನಾಚಿಸುವಂತೆ ಸ್ಟೆಪ್ ಹಾಕಿದ ವಧು: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿನಿಮಾ ನಟಿಯರನ್ನೂ ನಾಚಿಸುವಂತೆ ಸ್ಟೆಪ್ ಹಾಕಿದ ವಧು: ವಿಡಿಯೋ ವೈರಲ್

ಇತ್ತೀಚೆಗಂತೂ ಭಾರತೀಯ ವಿವಾಹ ಕಾರ್ಯಕ್ರಮಗಳಲ್ಲಿ ನೃತ್ಯವಿಲ್ಲದಿದ್ದರೆ ಸಮಾರಂಭವು ಅಪೂರ್ಣ ಅಂತಾನೆ ಬಿಂಬಿತವಾದಂತಿದೆ. ತಮ್ಮ ವಿವಾಹ ಸಮಾರಂಭದಲ್ಲಿ ವಧು-ವರರು ಯಾವುದೇ ಅಂಜಿಕೆಯಿಲ್ಲದೆ ಕುಣಿದು ಕುಪ್ಪಳಿಸುತ್ತಾರೆ. ಇದೀಗ ದೇಸಿ ವಧುವೊಬ್ಬಳ ನೃತ್ಯ ಪ್ರದರ್ಶನವು ಆನ್ಲೈನ್ ನಲ್ಲಿ ಭಾರಿ ವೈರಲ್ ಆಗಿದೆ,

ವಧುವು ಬ್ಲಫ್‌ಮಾಸ್ಟರ್ ಚಿತ್ರದ ಜನಪ್ರಿಯ ಟ್ರ್ಯಾಕ್ ʼಸೇ ನಾ ಸೇ ನಾʼಗೆ ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದಾರೆ. ವಧು ತನ್ನ ಗ್ಯಾಂಗ್‌ನೊಂದಿಗೆ ಸಖತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ. ಯಾವುದೇ ಅಂಜಿಕೆಯಲ್ಲದೆ ನೃತ್ಯವನ್ನು ಆನಂದಿಸಿದ್ದಾರೆ. ನೆರೆದಿದ್ದ ಅತಿಥಿಗಳು ಕೂಡ ವಧು ಸೇರಿದಂತೆ ಆಕೆಯ ಜೊತೆಗಾತಿಯರನ್ನು ಹುರಿದುಂಬಿಸಿದ್ದಾರೆ.

ಇಸ್ರಾನಿ ಫೋಟೋಗ್ರಫಿಯ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಸದ್ಯ, ವಿಡಿಯೋ ಭಾರಿ ವೈರಲ್ ಆಗಿದ್ದು, 2 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನೆಟ್ಟಿಗರು ಕೂಡ ವಧು ಹಾಗೂ ಆಕೆಯ ಗ್ಯಾಂಗ್ ನ ನೃತ್ಯ ಪ್ರದರ್ಶನವನ್ನು ಮೆಚ್ಚಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...