alex Certify ಮದುವೆ ದಿನ ಗೆಳತಿಯರೊಂದಿಗೆ ಭರ್ಜರಿ ಸ್ಟೆಪ್ ಹಾಕಿದ ವಧು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ದಿನ ಗೆಳತಿಯರೊಂದಿಗೆ ಭರ್ಜರಿ ಸ್ಟೆಪ್ ಹಾಕಿದ ವಧು

ಈಗಂತೂ ದೇಸಿ ವಿವಾಹ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಗಳಿಲ್ಲದೆ ಮದುವೆ ಪೂರ್ಣವಾಗುವುದೇ ಇಲ್ಲ ಎಂಬಂತಾಗಿದ್ದು, ವಧ, ವರ ತಮ್ಮ ವಿವಾಹದಲ್ಲಿ ಬಿಂದಾಸ್ ಆಗಿ ಕುಣಿದು ಕುಪ್ಪಳಿಸುತ್ತಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ದೇಸಿ ಮದುಮಗಳು ಹುಸ್ನ್ ಹೈ ಸುಹಾನಾಗೆ ನೃತ್ಯ ಮಾಡಿದ್ದಾರೆ.

ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಮೋಜಿನ ವಿಡಿಯೋ ವಧು ಮತ್ತು ತಂಡವು ಮದುವೆಯ ದಿನದಂದು ಮಸ್ತ್ ಸ್ಟೆಪ್ಸ್ ಹಾಕಿದ್ದಾರೆ. ನೃತ್ಯ ಮಾಡುವುದನ್ನು ಒಳಗೊಂಡಿದೆ. ವಧು ಮತ್ತು ಆಕೆಯ ಗ್ಯಾಂಗ್ ಕೂಲಿ ನಂ.1 ಚಿತ್ರದಿಂದ ಹುಸ್ನ್ ಹೈ ಸುಹಾನಾಗೆ ಡ್ಯಾನ್ಸ್ ಮಾಡಿದ್ದು, ಚಿಂದಿ ಉಡಾಯಿಸಿದ್ದಾರೆ.

ವಿಡಿಯೋದಲ್ಲಿರುವ ವಧುವನ್ನು ಸೋವಿನಾ ಚಾವ್ಲಾ ಎಂದು ಗುರುತಿಸಲಾಗಿದೆ. ಮೋರ್ ದ್ಯಾನ್ ತುಮ್ಕಾಸ್ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿವಾಹ ಸಮಾರಂಭದಲ್ಲಿ ಜೊನಿತಾ ಗಾಂಧಿಯವರ ಪಿಯಾ ತೋಸೆಗೆ ವಧು ನೃತ್ಯ ಮಾಡುವ ಮತ್ತೊಂದು ವಿಡಿಯೋ ಕೂಡ ವೈರಲ್ ಆಗಿದೆ. ವಧುವಿನ ನೃತ್ಯ ನೋಡಿದ ನೆಟ್ಟಿಗರು ಮನಸೋತಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...