ಗುಜರಾತ್ನ ಗಾಂಧಿನಗರ ರೈಲ್ವೇ ನಿಲ್ದಾಣದ ಉದ್ಘಾಟನೆ ಮಾಡಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ನಿಲ್ದಾಣದಲ್ಲಿ ಸೆಲ್ಫೀಯೊಂದನ್ನು ತೆಗೆದುಕೊಂಡು ಶೇರ್ ಮಾಡಿಕೊಂಡಿದ್ದಾರೆ.
ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣ ಮಾಡಲಾಗಿರುವ ಈ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ನಿಂತುಕೊಂಡು ಸಚಿವರು ಈ ಸೆಲ್ಫೀ ತೆಗೆದುಕೊಂಡಿದ್ದಾರೆ.
ಕೋವಿಡ್-19 ವ್ಯಾಕ್ಸಿನ್ ಪಡೆಯಲು ಲಸಿಕಾ ಕೇಂದ್ರಕ್ಕೆ ಬಂತು ಡೈನೋಸರ್..!
ದೇಶದ ಆಧುನಿಕ ಆಶೋತ್ತರಗಳನ್ನು ಪ್ರತಿಬಿಂಬಿಸುವಂತೆ ಈ ನಿಲ್ದಾಣವನ್ನು ಕಟ್ಟಲಾಗಿದೆ ಎಂದು ಸಚಿವರು ಟ್ವೀಟ್ನಲ್ಲಿ ಹೇಳಿಕೊಂಡಿದ್ದಾರೆ.
ದೇಶದ ಮೊದಲ ಮರುಅಭಿವೃದ್ಧಿ ಹೊಂದಿದ ರೈಲ್ವೇ ನಿಲ್ದಾಣವಾದ ಗಾಂಧಿನಗರ ಕ್ಯಾಪಿಟಲ್ನಲ್ಲಿ ಪಂಚತಾರಾ ಹೊಟೇಲ್ ಇದ್ದು, ಥೀಮ್ ಲೈಟಿಂಗ್ ಹಾಗೂ ಅಂತರ್ಜಾತೀಯ ಪ್ರಾರ್ಥನಾ ಕೇಂದ್ರ ಸೇರಿದಂತೆ ಹೊಚ್ಚ ಹೊಸ ಸವಲತ್ತುಗಳೆಲ್ಲವನ್ನೂ ಕೊಡಮಾಡಲಾಗಿದೆ.