alex Certify BIG NEWS: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಗೆ ಜೀವಾವಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಗೆ ಜೀವಾವಧಿ

ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಮತ್ತು ಇತರ ನಾಲ್ವರಿಗೆ ಹರ್ಯಾಣದ ಪಂಚಕುಲಾದ ವಿಶೇಷ ಸಿಬಿಐ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಗುರ್ಮೀತ್ ರಾಮ್ ರಹೀಮ್ ಗೆ 31 ಲಕ್ಷ ರೂ. ಮತ್ತು ಇತರ ನಾಲ್ಕು ಆರೋಪಿಗಳಿಗೆ 50 ಸಾವಿರ ರೂ. ದಂಡ ವಿಧಿಸಲಾಗಿದೆ.

ರಂಜಿತ್ ಸಿಂಗ್ ಕೊಲೆ ಪ್ರಕರಣ ವಿವರ 

ಈ ಪಂಥದ ಅನುಯಾಯಿಯಾಗಿದ್ದ ಮಾಜಿ ಡೇರಾ ಮ್ಯಾನೇಜರ್ ರಂಜಿತ್ ಸಿಂಗ್ ಅವರನ್ನು 2002 ರಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಅನಾಮಧೇಯ ಪತ್ರದ ಪ್ರಸರಣದಲ್ಲಿ ಆತನ ಶಂಕಿತ ಪಾತ್ರಕ್ಕಾಗಿ ಆತನನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

ಸಿಬಿಐ ಚಾರ್ಜ್ ಶೀಟ್ ಪ್ರಕಾರ, ಅನಾಮಧೇಯ ಪತ್ರದ ಚಲಾವಣೆಯ ಹಿಂದೆ ರಂಜಿತ್ ಸಿಂಗ್ ಇರುವುದಾಗಿ ತಿಳಿದ ಡೇರಾ ಮುಖ್ಯಸ್ಥ, ಆತನನ್ನು ಕೊಲ್ಲಲು ಸಂಚು ರೂಪಿಸಿದ್ದರು. ಪ್ರಸ್ತುತ ಜೈಲಿನಲ್ಲಿರುವ ಗುರ್ಮೀತ್ ರಾಮ್ ರಹೀಮ್ ಮತ್ತು ಪ್ರಕರಣದ ಇತರ ಆರೋಪಿಗಳಾದ ಜಸ್ಬೀರ್ ಸಿಂಗ್, ಸಬ್ದಿಲ್, ಅವತಾರ್ ಸಿಂಗ್, ಕ್ರಿಶನ್ ಲಾಲ್ ಮತ್ತು ದಿವಂಗತ ಇಂದರ್ ಸೇನ್ ರ ವಿಚಾರಣೆ ನಡೆಸಿ, ಇವರ ಶಿಕ್ಷೆಯನ್ನು ವಿಶೇಷ ಸಿಬಿಐ ನ್ಯಾಯಾಲಯವು ಅಕ್ಟೋಬರ್ 18ಕ್ಕೆ ಮುಂದೂಡಿತ್ತು.

ಗುರ್ಮೀತ್ ರಾಮ್ ರಹೀಮ್ ವಿರುದ್ಧದ ಚಾರ್ಜ್‌ಗಳು ಯಾವುವು ?

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ಮತ್ತು 120 ಬಿ ಅಡಿಯಲ್ಲಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಜಸ್ಬೀರ್ ಮತ್ತು ಸಬ್ದಿಲ್ ಎಂಬ ಇಬ್ಬರು ಆರೋಪಿಗಳು ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಆರೋಪಗಳನ್ನು ಎದುರಿಸಿದ್ದಾರೆ. ಅವರು ಹರಿಯಾಣದ ಕುರುಕ್ಷೇತ್ರದಲ್ಲಿ ರಂಜಿತ್ ನನ್ನು ಗುಂಡಿಕ್ಕಿ ಕೊಂದಿದ್ದಾರೆ.

ಗುರ್ಮೀತ್ ರಾಮ್ ರಹೀಮ್ ವಿರುದ್ಧ ಇತರ ಪ್ರಕರಣಗಳು

ಗುರ್ಮೀತ್ ರಾಮ್ ರಹೀಮ್ ಸಿಂಗ್ ಪ್ರಸ್ತುತ ತನ್ನ ಇಬ್ಬರು ಮಹಿಳಾ ಶಿಷ್ಯರನ್ನು ತನ್ನ ಆಶ್ರಮದಲ್ಲಿ ಅತ್ಯಾಚಾರ ಮಾಡಿದ ಆರೋಪದ ಮೇಲೆ 20 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ. ಪಂಚಕುಲಾದ ವಿಶೇಷ ಸಿಬಿಐ ನ್ಯಾಯಾಲಯವು ಅವರನ್ನು ಆಗಸ್ಟ್ 2017 ರಲ್ಲಿ ಅಪರಾಧಿ ಎಂದು ತೀರ್ಪು ನೀಡಿತ್ತು.

2019 ರಲ್ಲಿ ಗುರ್ಮಿತ್ ರಾಮ್ ರಹೀಮ್ ಸಿಂಗ್ ಮತ್ತು ಇತರ ಮೂವರನ್ನು, ಪತ್ರಕರ್ತ ರಾಮಚಂದ್ರ ಛತ್ರಪತಿ ಅವರ ಕೊಲೆ ಅಪರಾಧಿ ಎಂದು ಘೋಷಿಸಲಾಯಿತು. ಡೇರಾ ಸಚ್ಚಾ ಸೌದಾ ಮುಖ್ಯಸ್ಥರು ನಡೆಸುತ್ತಿದ್ದ ಲೈಂಗಿಕ ಶೋಷಣೆಯ ಬಗ್ಗೆ ಅನಾಮಧೇಯ ಪತ್ರವನ್ನು ಅವರು ಪ್ರಕಟಿಸಿದ್ದರು. ಹೀಗಾಗಿ ಪತ್ರಕರ್ತರ ಹತ್ಯೆ ಮಾಡಲಾಗಿತ್ತು.

ಬುರ್ಜ್ ಜವಾಹರ್ ಸಿಂಗ್ ವಾಲಾ ಗುರುದ್ವಾರದಿಂದ ಗುರು ಗ್ರಂಥ ಸಾಹಿಬ್‌ನ ‘ಬಿರ್’ (ಕಾಪಿ) ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಗುರ್ಮೀತ್ ರಾಮ್ ರಹೀಮ್ ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...