ಡೆಲ್ಟಾ ರೂಪಾಂತರಿಯ ಬಗ್ಗೆ ಐಸಿಎಂಆರ್ ಅಧ್ಯಯನದಲ್ಲಿ ಬಯಲಾಯ್ತು ಮಹತ್ವದ ಮಾಹಿತಿ 19-08-2021 12:14PM IST / No Comments / Posted In: Latest News, India, Live News ಚೆನ್ನೈನಲ್ಲಿ ಐಸಿಎಂಆರ್ ನಡೆಸಿದ ಅಧ್ಯಯನದಲ್ಲಿ ಕೊರೊನಾ ರೂಪಾಂತರಿಯು ಲಸಿಕೆ ಹಾಕಿಸಿಕೊಳ್ಳದವರ ಜೊತೆಗೆ ಲಸಿಕೆ ಸ್ವೀಕರಿಸಿದವರಿಗೂ ಹರಡುವ ಸಾಧ್ಯತೆ ಹೊಂದಿದೆ ಎಂದು ತಿಳಿದು ಬಂದಿದೆ. ಆದರೆ ಇದು ಮರಣದ ಪ್ರಮಾಣವನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿರಲಿದೆ. ಈ ಅಧ್ಯಯನವನ್ನು ಐಸಿಎಂಆರ್ ಅಂಗೀಕರಿಸಿದೆ ಹಾಗೂ ಆಗಸ್ಟ್ 17ರಂದು ಜರ್ನಲ್ ಆಫ್ ಇನ್ಫೆಕ್ಷನ್ನಲ್ಲಿ ಪ್ರಕಟಿಸಲಾಗಿದೆ. ಲಸಿಕೆ ಹಾಕಿಸಿಕೊಂಡ ಹಾಗೂ ಲಸಿಕೆ ಹಾಕಿಸಿಕೊಳ್ಳದವರಲ್ಲಿ B.1.617.2 ರೂಪಾಂತರಿಯು ಯಾವುದೇ ವ್ಯತ್ಯಾಸವನ್ನು ಹೊಂದಿಲ್ಲ ಎಂದು ಅಧ್ಯಯನ ಹೇಳಿದೆ. ಡೆಲ್ಟಾ ರೂಪಾಂತರಿಯು ದೇಶದಲ್ಲಿ ಕೊರೊನಾ 2ನೆ ಅಲೆಗೆ ಪ್ರಮುಖ ಕಾರಣವಾಗಿತ್ತು. ‘ಡಮ್ ಡುಮಾ ದಮ್’ ಹಾಡಿಗೆ ಕುಣಿದು ಕುಪ್ಪಳಿಸಿದ ರಿಕಿ ಪಾಂಡ್ ಸಾಂಕ್ರಾಮಿಕದ ಭೀಕರತೆಯನ್ನು ತಪ್ಪಿಸಲು ಕೊರೊನಾ ಲಸಿಕೆ ಅಭಿಯಾನವನ್ನು ಇನ್ನಷ್ಟು ಚುರುಕುಗೊಳಿಸಬೇಕು ಹಾಗೂ ಹೊಸ ರೂಪಾಂತರಿಗಳ ಮೇಲೆ ಸಂಪೂರ್ಣ ನಿಗಾ ವಹಿಸಬೇಕು ಎಂದು ಈ ಅಧ್ಯಯನವು ಹೇಳಿದೆ. An ICMR study conducted in Chennai has found that the Delta variant has the potential to infect both vaccinated and unvaccinated individuals, but it reduces mortality among the former group pic.twitter.com/nskpcyNfje — ANI (@ANI) August 19, 2021