ಕೊರೊನಾ 2ನೆ ಅಲೆಯ ವಿರುದ್ಧ ಹೋರಾಟ ಮುಂದುವರಿದಿರುವಾಗಲೇ ಡೆಲ್ಟಾ ವೈರಸ್ ಹೊಸ ರೂಪಾಂತರವನ್ನ ಪಡೆದುಕೊಂಡಿದ್ದು ಡೆಲ್ಟಾ ಪ್ಲಸ್ ಅಥವಾ ಎವೈ. 1 ಆಗಿ ಬದಲಾಗಿತ್ತು. ಈ ವೈರಸ್ ಅತ್ಯಂತ ಅಪಾಯಕಾರಿ ಎಂದು ತಜ್ಞರು ಎಚ್ಚರಿಕೆ ಸಂದೇಶ ನೀಡಿರುವ ಬೆನ್ನಲ್ಲೇ ಇದೀಗ ರಾಜ್ಯದಲ್ಲೂ ಈ ಮಹಾಮಾರಿ ರೂಪಾಂತರಿ ಕಾಲಿಟ್ಟಿದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ಬೆಂಗಳೂರು ಹಾಗೂ ಮೈಸೂರಿನಲ್ಲಿ ತಲಾ 1 ಡೆಲ್ಪಾ ಪ್ಲಸ್ ರೂಪಾಂತರಿ ವೈರಸ್ ಸೋಂಕು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಮಹಾರಾಷ್ಟ್ರ, ಕೇರಳ ಹಾಗೂ ಮಧ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಈ ವೈರಸ್ ಇದೀಗ ಕರ್ನಾಟಕ್ಕೂ ಕಾಲಿಟ್ಟಿರೋದು ಆತಂಕಕ್ಕೆ ಕಾರಣವಾಗಿದೆ.
ಕೊರೊನಾ ಡೆಲ್ಟಾ ರೂಪಾಂತರವು ಭಾರತಕ್ಕೆ ಮೊದಲ ಬಾರಿಗೆ ಕಾಣಿಸಿಕೊಂಡ ಬಳಿಕವೇ ಎರಡನೇ ಅಲೆ ಅಷ್ಟೊಂದು ಭಯಾನಕವಾಗಲು ಕಾರಣವಾಗಿತ್ತು. ಇದೀಗ ಈ ಭಯಾನಕ ವೈರಸ್ ಮತ್ತೊಂದು ರೂಪ ಪಡೆದಿರೋದು ಇನ್ಯಾವ ಅಪಾಯವನ್ನ ತಂದೊಡ್ಡಲಿದೆ ಎಂಬ ಭಯ ಶುರುವಾಗಿದೆ. ದೇಶದಲ್ಲಿ ಕೊರೊನಾ ವಿರುದ್ಧದ ಚಿಕಿತ್ಸೆಗೆ ಇತ್ತೀಚಿಗೆ ಬಳಕೆಯಾಗುತ್ತಿರುವ ಕಾಕ್ಟೈಲ್ ಮೊನೊಕ್ಲೋನಲ್ ಕೊರೊನಾ ವೈರಸ್ ಡೆಲ್ಟಾ ಪ್ಲಸ್ ನಿರೋಧಕವಾಗಿ ಕಾರ್ಯ ನಿರ್ವಹಿಸುತ್ತೆ.