ಆಹಾರ ಆರ್ಡರ್ ಮಾಡಿ ಕಾಯ್ತಿದ್ದವ ಮೆಸೇಜ್ ನೋಡಿ ಶಾಕ್….! ಸಾರಿ ನಾನೇ ತಿಂದೆ ಎಂದ ಡೆಲಿವರಿ ಬಾಯ್ 01-11-2022 3:22PM IST / No Comments / Posted In: Latest News, Live News, International ಆನ್ಲೈನ್ನಿಂದ ಆಹಾರ ಆರ್ಡರ್ ಮಾಡಿ ಎಷ್ಟು ಹೊತ್ತಾದರೂ ಅದು ಬರದಿದ್ದರೆ ನಿಮಗೆ ಹೇಗಾಗಬೇಡ? ಆದರೂ ನಿಮ್ಮಿಷ್ಟದ ಆಹಾರ ಬರುತ್ತದೆ ಎಂದು ಸ್ವಲ್ಪ ಹೊತ್ತು ಪೇಷನ್ಸ್ನಿಂದ ಕಾಯುತ್ತೀರಿ ಅಲ್ಲವೆ? ಇಲ್ಲೊಂದು ಘಟನೆಯಲ್ಲಿಯೂ ಆರ್ಡರ್ ಮಾಡಿದ ಗ್ರಾಹಕ ತನ್ನ ಆಹಾರಕ್ಕಾಗಿ ಕಾದು ಕುಳಿತ. ಆದರೆ ಬಂದದ್ದು ಆಹಾರವಲ್ಲ, ಬದಲಿಗೆ ಆಹಾರ ನೀಡುವ ಡೆಲಿವರಿ ಬಾಯ್ ನ ಸಂದೇಶ! ಅಷ್ಟಕ್ಕೂ ಈ ಸಂದೇಶ ಏನು ಅಂತೀರಾ? ನೀವು ಆರ್ಡರ್ ಮಾಡಿದ್ದ ಫುಡ್ ತುಂಬಾ ಟೇಸ್ಟಿಯಾಗಿತ್ತು ಎಂದು…! ಇದನ್ನು ನೋಡಿ ಗ್ರಾಹಕ ಕಕ್ಕಾಬಿಕ್ಕಿಯಾದ. ಮೊದಲಿಗೆ ಸಂದೇಶ ಕಳುಹಿಸಿದ್ದ ಡೆಲವರಿ ಬಾಯ್, ಹೀಗೆ ನಾನು ಹೇಳುತ್ತಿದ್ದುದಕ್ಕೆ ಸಾರಿ. ನಿಮ್ಮ ಆಹಾರವನ್ನು ನಾನೇ ತಿಂದುಬಿಟ್ಟೆ. ತುಂಬಾ ಟೇಸ್ಟಿಯಾಗಿತ್ತು ಎಂದಿದ್ದಾನೆ. ಇದನ್ನು ಓದಿದ ಗ್ರಾಹಕ ಕಕ್ಕಾಬಿಕ್ಕಿಯಾಗಿದ್ದಾನೆ. ಹೀಗೆ ಮೋಸ ಹೋದ ಗ್ರಾಹಕನಾಗಿರುವ ಲಿಯಾಮ್ ಬಾಗ್ನಾಲ್ ತಮ್ಮ ಟ್ವಿಟರ್‌ನಲ್ಲಿ ಈ ಸಂವಾದವನ್ನು ಶೇರ್ ಮಾಡಿಕೊಂಡಿದ್ದಾರೆ. ಮೊದಲಿಗೆ ಸಾರಿ ಎಂದು ಆತ ಹೇಳಿದ್ದಾನೆ. ಲಿಯಾಮ್ ಏಕೆ ಎಂದು ಪ್ರಶ್ನಿಸಿದಾಗ ನೀವು ಆರ್ಡರ್ ಮಾಡಿದ್ದ ಆಹಾರವನ್ನು ನಾನೇ ತಿಂದಿರುವುದಾಗಿ ಆತ ಹೇಳಿಕೊಂಡಿದ್ದಾನೆ. ಇದಕ್ಕೆ ವಿಪರೀತ ಸಿಟ್ಟು ಮಾಡಿಕೊಂಡ ಲಿಯಾಮ್ ನೀನೊಬ್ಬ ವಿಚಿತ್ರ ಮನುಷ್ಯ ಎಂದಿರುವುದು ಸಂಭಾಷಣೆಯಲ್ಲಿ ನೋಡಬಹುದು. ಈ ಬಗ್ಗೆ ಕಂಪೆನಿಯಿಂದ ಪರಿಹಾರಕ್ಕಾಗಿ ಕೋರಿ ಲಿಯಾಮ್ ದೂರು ಸಲ್ಲಿಸಿದ್ದಾರೆ. ಅದರಲ್ಲಿ ಈ ಸಂದೇಶದ ಸ್ಕ್ರೀನ್ಷಾಟ್ಗಳನ್ನು ಇಟ್ಟಿದ್ದಾರೆ. Deliveroo driver has gone rogue this morning pic.twitter.com/sFNMUtNRrk — Bags (@BodyBagnall) October 28, 2022