alex Certify ನೈಟ್ ಶಿಫ್ಟ್ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿ ಅಪಹರಿಸಿ ಅತ್ಯಾಚಾರ, ಕ್ಯಾಬ್ ಡ್ರೈವರ್ ಸೇರಿ ಐವರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೈಟ್ ಶಿಫ್ಟ್ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿ ಅಪಹರಿಸಿ ಅತ್ಯಾಚಾರ, ಕ್ಯಾಬ್ ಡ್ರೈವರ್ ಸೇರಿ ಐವರ ಕೃತ್ಯ

ಗುರುಗ್ರಾಮ್: ಹರಿಯಾಣದಿಂದ ವರದಿಯಾದ ಆಘಾತಕಾರಿ ಘಟನೆಯಲ್ಲಿ ರಾತ್ರಿ ಪಾಳಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ದೆಹಲಿ ಯುವತಿ ಅಪಹರಿಸಿ ಕ್ಯಾಬ್ ಚಾಲಕ ಸೇರಿ ಐವರು ಝಜ್ಜರ್ ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

24 ವರ್ಷದ ಯುವತಿ ಗುರುಗ್ರಾಮ್ ದಲ್ಲಿ ನೈಟ್ ಶಿಫ್ಟ್ ನಂತರ ಮನೆಗೆ ಮರಳುವಾಗ ಘಟನೆ ನಡೆದಿದೆ. ಬೆಳಗಿನಜಾವ 3 ಗಂಟೆಗೆ ಇಫ್ಕೋ ಚೌಕ್ ನಿಂದ ಯುವತಿ ಕ್ಯಾಬ್ ಹತ್ತಿದ್ದು ಮೂವರು ಆಕೆಯನ್ನು ಅಪಹರಿಸಿ ಝಜ್ಜರ್ ಜಿಲ್ಲೆಯ ನಿರ್ಜನ ಪ್ರದೇಶದ ಹೊಲಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಕ್ಯಾಬ್ ಝಜ್ಜರ್ ತಲುಪಿದಾಗ ಮೂವರು ಆರೋಪಿಗಳು ಮತ್ತಿಬ್ಬರನ್ನು ವಾಹನಕ್ಕೆ ಹತ್ತಿಸಿಕೊಂಡಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೆ ಮೊದಲು ಮದ್ಯ ಸೇವಿಸಿದ ಆರೋಪಿಗಳು ಆಕೆಯನ್ನು ಕ್ಯಾಬ್ ನಲ್ಲಿ ಲಾಕ್ ಮಾಡಿದ್ದಾರೆ. ಬೆಳಗಿನವರೆಗೂ ಮೇಲೆ ಅತ್ಯಾಚಾರ ಎಸಗಿ ಫಾರೂಕ್ ನಗರ ಸಮೀಪ ಆಕೆಯನ್ನು ಎಸೆದು ಪರಾರಿಯಾಗಿದ್ದಾರೆ. ಯುವತಿ ನೆರವಿಗೆ ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಆರೋಪಿಗಳಲ್ಲಿ ಕೆಲವರ ಹೆಸರುಗಳನ್ನು ಯುವತಿ ಪೊಲೀಸರಿಗೆ ಹೇಳಿದ್ದಾಳೆ.

ಸಂತ್ರಸ್ತೆ ದ್ವಾರಕಾ ರಸ್ತೆ ನಿವಾಸಿಯಾಗಿದ್ದು ಗುರುಗ್ರಾಮದ ಎಂಜಿ ರಸ್ತೆಯ ಮಾಲ್ ನಲ್ಲಿ ಕೆಲಸಮಾಡುತ್ತಿದ್ದಾಳೆ. ಭಾನುವಾರ ರಾತ್ರಿ ಇಫ್ಕೋ ಚೌಕ್ ಗೆ ಹೋಗಿ ಕ್ಯಾಬ್ ಗೆ ಕಾಯುತ್ತಿರುವಾ ಕ್ಯಾಬ್ ಚಾಲಕ ಆಕೆಯನ್ನು ದ್ವಾರಕ ಮೋಡ್ ನಲ್ಲಿ ಇಳಿಸಲು ಒಪ್ಪಿಕೊಂಡಿದ್ದರಿಂದ ಕ್ಯಾಬ್ ಹತ್ತಿದ್ದಾಳೆ.

ಕ್ಯಾಬ್ ಹತ್ತಿದ ನಂತರ ಕೆಲಕ್ಷಣ ನಾನು ನಿದ್ದೆಗೆ ಜಾರಿದ್ದು, ಬಳಿಕ ಅವರು ಬೇರೆ ಮಾರ್ಗಕ್ಕೆ ಕರೆದುಕೊಂಡು ಹೋಗುತ್ತಿರುವುದು ಗೊತ್ತಾಗಿ ಪ್ರಶ್ನಿಸಿದಾಗ ಜೀವ ಬೆದರಿಕೆ ಹಾಕಿದ್ದಾರೆ. ಅಪಹರಣ ಮಾಡಿ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಹೇಳಿದ್ದಾಳೆ. ಆರೋಪಿಗಳ ವಿರುದ್ಧ ವಿವಿಧ ಪ್ರಕರಣಗಳಲ್ಲಿ ಕೇಸ್ ದಾಖಲಿಸಲಾಗಿದೆ ಎಂದು ಮನೇಸರ್ ಡಿಸಿಪಿ ವರುಣ್ ಸಿಂಗ್ಲಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...