alex Certify ಬಯಲಾಯ್ತು ಬಾಡಿಗೆದಾರನ ಅಸಲಿಯತ್ತು: ಸಂಬಂಧ ಬೆಳೆಸಿದ ಯುವತಿಗೆ ಬಿಗ್ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಯಲಾಯ್ತು ಬಾಡಿಗೆದಾರನ ಅಸಲಿಯತ್ತು: ಸಂಬಂಧ ಬೆಳೆಸಿದ ಯುವತಿಗೆ ಬಿಗ್ ಶಾಕ್

ನವದೆಹಲಿ: ತನ್ನ ಮನೆಗೆ ಬಾಡಿಗೆಗೆ ಬಂದ ವ್ಯಕ್ತಿಯಿಂದ ವಂಚನೆಗೊಳಗಾದ ಸಂಗಮ್ ವಿಹಾರ್ ನಿವಾಸಿಯಾಗಿರುವ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಬಾಡಿಗೆದಾರನಾಗಿ ಬಂದಿದ್ದ ವ್ಯಕ್ತಿ ತನ್ನ ಹೆಸರು ಸುಳ್ಳು ಹೇಳಿ ಪ್ರೀತಿಸಿ ಲೈಂಗಿಕ ಸಂಪರ್ಕ ಬೆಳೆಸಿದ್ದು, ನಂತರ ಮದುವೆ ಮಾಡಿಕೊಂಡು ಮತಾಂತರವಾಗುವಂತೆ ಬಲವಂತ ಮಾಡುತ್ತಿರುವುದಾಗಿ ಸರಿತಾ ವಿಹಾರ್ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದಾಳೆ.

ಯುವತಿ ಮನೆಗೆ ಬಾಡಿಗೆದಾರನಾಗಿ ಸೇರಿಕೊಂಡಿದ್ದ 20 ವರ್ಷದ ಸಾಹಿಬ್ ಅಲಿ ಎಂಬಾತ ತನ್ನ ಹೆಸರನ್ನು ರಾಹುಲ್ ಎಂದು ಹೇಳಿಕೊಂಡು ಪರಿಚಯಿಸಿಕೊಂಡಿದ್ದ. ನಂತರದಲ್ಲಿ ಆತನೊಂದಿಗೆ ಗೆಳೆತನವಾಗಿ ಇಬ್ಬರು ಪ್ರೀತಿಸಿದ್ದಾರೆ. ದೈಹಿಕ ಸಂಪರ್ಕ ಬೆಳೆಸಿದ್ದ ಆತ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ತನ್ನ ತಂದೆ, ತಾಯಿ, ಸಹೋದರ, ಸಹೋದರಿಯರಿಗೆ ಪರಿಚಯಿಸಿ ಮದುವೆಯಾದ ನಂತರ ತನ್ನ ಧರ್ಮಕ್ಕೆ ಮತಾಂತರವಾಗುವಂತೆ ಬಲವಂತ ಮಾಡಿ ಹಿಂಸೆ ನೀಡಿದ್ದಾನೆ. ಆತನ ತಂದೆ ಕೂಡ ಅನುಚಿತವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎಂದು ಯುವತಿ ದೂರು ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಸರಿತಾ ವಿಹಾರ್ ಠಾಣೆ ಪೊಲೀಸರು ಅತ್ಯಾಚಾರ ಸೇರಿ ವಿವಿಧ ಪ್ರಕರಣಗಳಲ್ಲಿ ಕೇಸು ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...