ನವದೆಹಲಿ: ದೆಹಲಿಯಲ್ಲಿ ಟೊಮೆಟೊ ದರ ಸಾರ್ವಕಾಲಿಕ ದಾಖಲೆ ಬರೆದಿದ್ದು, ಕೆಜಿಗೆ 260 ರೂ.ಗೆ ಮಾರಾಟವಾಗಿದೆ.
ಟೊಮೆಟೊ ಪೂರೈಕೆಯಲ್ಲಿ ಭಾರಿ ವ್ಯತ್ಯಯವಾಗಿದ್ದರಿಂದ ದರ ಏರಿಕೆಯಾಗಿದೆ. ಕಳೆದ ಮೂರು ದಿನಗಳಿಂದ ದೆಹಲಿಗೆ ಟೊಮೆಟೊ ಪೂರೈಕೆಯಾಗಿಲ್ಲ. ಭಾರಿ ಮಳೆ ಕಾರಣ ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿದ್ದು, ಕರ್ನಾಟಕ, ಆಂಧ್ರಪ್ರದೇಶದಿಂದ ಹೆಚ್ಚಿನ ಪ್ರಮಾಣದಲ್ಲಿ ದೆಹಲಿಗೆ ಟೊಮೆಟೊ ಪೂರೈಕೆ ಆಗಿಲ್ಲ.
ದೆಹಲಿಯಲ್ಲಿ ಮದರ್ ಡೈರಿ ಚಿಲ್ಲರೆ ಮಾರಾಟ ಅಂಗಡಿಗಳಲ್ಲಿ ಕೆಜಿ ಟೊಮೆಟೊ 259 ರೂಪಾಯಿಗೆ ಮಾರಾಟ ಮಾಡಲಾಗಿದೆ.