ಮಾರ್ಕೆಟಿಂಗ್ ತಂತ್ರಗಾರಿಕೆ ಎನ್ನುವುದು ಕೇವಲ ದೊಡ್ಡ ದೊಡ್ಡ ಕಂಪನಿಗಳಿಗೆ ಮಾತ್ರವಲ್ಲ ಒಮ್ಮೊಮ್ಮೆ ಸಣ್ಣ ಪುಟ್ಟ ವರ್ತಕರಿಗೂ ಆವಿಷ್ಕಾರೀ ಮಾರ್ಕೆಟಿಂಗ್ ಐಡಿಯಾಗಳು ಹೊಳೆಯುತ್ತವೆ.
2,000 ರೂ. ಮುಖಬೆಲೆಯ ನೋಟುಗಳನ್ನು ಪರಿಚಲನೆಯಿಂದ ಹಿಂಪಡೆಯುವ ರಿಸರ್ವ್ ಬ್ಯಾಂಕ್ ನಿರ್ಧಾರದಿಂದಾಗಿ ದೇಶದ ಯಾವುದೇ ಬ್ಯಾಂಕುಗಳು ಈ ಮುಖಬೆಲೆಯ ನೋಟುಗಳನ್ನು ವಿತರಿಸುವುದನ್ನು ನಿಲ್ಲಿಸಿವೆ. ಇದೇ ವೇಳೆ, ಜನರ ಬಳಿ ಇರುವ ಈ ನೋಟುಗಳನ್ನು ನಿಧಾನವಾಗಿ ಬ್ಯಾಂಕುಗಳಿಗೆ ಕೊಟ್ಟು ಅವುಗಳ ಬದಲಿಗೆ ಬೇರೆ ಮುಖಬೆಲೆಯ ನೋಟುಗಳನ್ನು ಪಡೆಯಲು ನಾಲ್ಕು ತಿಂಗಳ ಅವಕಾಶ ನೀಡಲಾಗಿದೆ.
ಇದೀಗ ಇದೇ ಪರಿಸ್ಥಿತಿಯನ್ನು ಒಂದೊಳ್ಳೆ ಬ್ಯುಸಿನೆಸ್ ಐಡಿಯಾ ಆಗಿ ಪರಿವರ್ತಿಸಿರುವ ವರ್ತಕರೊಬ್ಬರು, “ನಮಗೆ 2000 ರೂ. ನೋಟು ಕೊಡಿ ಹಾಗೂ 2,100 ರೂ. ಗಳ ಖರೀದಿ ಮಾಡಿಕೊಂಡು ಹೋಗಿ,” ಎಂದು ತನ್ನ ಅಂಗಡಿ ಮುಂದೆ ಬೋರ್ಡ್ ನೇತು ಹಾಕಿದ್ದಾನೆ.
“ಆರ್‌ಬಿಐ ಸ್ಮಾರ್ಟ್ ಎಂದು ನೀವಂದುಕೊಂಡರೆ, ಇನ್ನೊಮ್ಮೆ ಯೋಚಿಸಿ ನೋಡಿ. ಏಕೆಂದರೆ ದಿಲ್ಲಿವಾಸಿಗಳು ಇದಕ್ಕಿಂತಲೂ ಸ್ಮಾರ್ಟ್ ಆಗಿದ್ದಾರೆ. ಮಾರಾಟ ಹೆಚ್ಚಿಸಲು ಎಂಥಾ ಆವಿಷ್ಕಾರೀ ಐಡಿಯಾ” ಎಂದು ಕ್ಯಾಪ್ಷನ್ ಕೊಟ್ಟು ಈ ಬೋರ್ಡ್‌ನ ಫೋಟೋವನ್ನು ಸುಮೀತ್ ಅಗರ್ವಾಲ್ ಹೆಸರಿನ ನೆಟ್ಟಿಗರೊಬ್ಬರು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.