alex Certify ಅತ್ಯಾಚಾರ ಆರೋಪಿ ಬಂಧನಕ್ಕೆ ಅನನ್ಯ ಮಾರ್ಗ ಹಿಡಿದ ಮಹಿಳಾ ಸಬ್ ಇನ್ಸ್ಪೆಕ್ಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತ್ಯಾಚಾರ ಆರೋಪಿ ಬಂಧನಕ್ಕೆ ಅನನ್ಯ ಮಾರ್ಗ ಹಿಡಿದ ಮಹಿಳಾ ಸಬ್ ಇನ್ಸ್ಪೆಕ್ಟರ್

ದೆಹಲಿಯ ಮಹಿಳಾ ಸಬ್ ಇನ್ಸ್ಪೆಕ್ಟರ್ ಅನನ್ಯ ರೀತಿಯಲ್ಲಿ ಅತ್ಯಾಚಾರಿ ಆರೋಪಿಯನ್ನು ಬಂಧಿಸಿದ್ದಾರೆ. ಮೊದಲು ಆರೋಪಿ ಜೊತೆ ಸ್ನೇಹ ಬೆಳೆಸಿದ ಸಬ್ ಇನ್ಸ್ಪೆಕ್ಟರ್ ನಂತ್ರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿ, ಕಳೆದ ಕೆಲ ದಿನಗಳ ಹಿಂದೆ ಅಪ್ರಾಪ್ತೆಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದ. ಮನೆ ಬಳಿ ಸಿಕ್ಕ ವ್ಯಕ್ತಿ, ಮೊದಲು ಸ್ನೇಹ ಬೆಳೆಸಿದ್ದನಂತೆ. ನಂತ್ರ ಅಪ್ರಾಪ್ತೆ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದನಂತೆ. ನಂತ್ರ ಪೀಡಿತೆಯಿಂದ ದೂರವಿದ್ದ ವ್ಯಕ್ತಿ, ಸಾಮಾಜಿಕ ಜಾಲತಾಣದಲ್ಲಿಯೂ ಯಾವುದೇ ಪ್ರತಿಕ್ರಿಯೆ ನೀಡ್ತಿರಲಿಲ್ಲ. ಪೀಡಿತೆ ಬಳಿ ಆತನ ಫೋನ್ ನಂಬರ್ ಇರಲಿಲ್ಲ. ಹಾಗಾಗಿ ಪತ್ತೆ ಕಾರ್ಯ ಕಷ್ಟವಾಗಿತ್ತು.

ಇತಿಹಾಸ ರಚಿಸಿ ಸೆಮಿಫೈನಲ್ ಪ್ರವೇಶಿಸಿದ ಭಾರತ ಮಹಿಳಾ ಹಾಕಿ ಟೀಂ

ಸಾಮಾಜಿಕ ಜಾಲತಾಣದಲ್ಲಿ ಆತನಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ ಸಬ್ ಇನ್ಸ್ಪೆಕ್ಟರ್, ಮೊದಲು ಸ್ನೇಹ ಬೆಳೆಸಿದ್ದಾರೆ. ನಂತ್ರ ಭೇಟಿಯಾಗುವಂತೆ ಹೇಳಿದ್ದಾರೆ. ನಾಲ್ಕೈದು ಜಾಗ ಹೇಳಿದ ಆರೋಪಿ ಕೊನೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಆರೋಪಿ ದ್ವಾರಕಾದ ಬಳೆ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದಾನೆ. ಅನೇಕ ಹುಡುಗಿಯರಿಗೆ ಹೀಗೆ ಮೋಸ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...