alex Certify ಬರೋಬ್ಬರಿ 14 ವರ್ಷಗಳ ಬಳಿಕ ಕೊಲೆ ಆರೋಪಿ ಅಂದರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 14 ವರ್ಷಗಳ ಬಳಿಕ ಕೊಲೆ ಆರೋಪಿ ಅಂದರ್

Delhi police arrests murder case accused on the run for 14 years - India News

14 ವರ್ಷಗಳ ಸುದೀರ್ಘ ಪ್ರಯತ್ನದ ಬಳಿಕ ದೆಹಲಿ ಪೊಲೀಸ್‌ನ ಕ್ರೈಂ ಬ್ರಾಂಚ್ ಕೊಲೆ ಪ್ರಕರಣವೊಂದರ ಆರೋಪಿ, ವಾಂಟೆಡ್ ಕ್ರಿಮಿನಲ್‌ ಒಬ್ಬನನ್ನು ಬಂಧಿಸಿದೆ. ಮುಜಾಫರ್‌ನಗರದ ನಿವಾಸಿ ವಿಕ್ರಮ್ (47) ಎಂಬ ಆರೋಪಿಯು 2008 ರಲ್ಲಿ ರೋಹಿಣಿಯಲ್ಲಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು ತನ್ನ ಸಹಚರನೊಂದಿಗೆ ಸೇರಿಕೊಂಡಿದ್ದ.

ಪ್ರಕರಣದ ಪ್ರಮುಖ ಆರೋಪಿ ರಾಬಿನ್ ಎಂದು ಗುರುತಿಸಲಾಗಿದ್ದು, ಈ ಅಪರಾಧ ವರದಿಯಾದ ಒಂದು ವರ್ಷದ ನಂತರ, ಮೇ 2, 2009 ರಂದು ನ್ಯಾಯಾಲಯವು ವಿಕ್ರಮ್‌ನನ್ನು ತಪ್ಪಿತಸ್ಥ ಎಂದು ಘೋಷಿಸಿತು.

ರಾಬಿನ್ ಹಾಗೂ ಆತನ ಸಹಚರರನ್ನು ಹಿಡಿಯಲು ಪೊಲೀಸರು ಹಲವಾರು ಅಡಗುತಾಣಗಳ ಮೇಲೆ ದಾಳಿ ನಡೆಸಿದ್ದರು. ಆದರೆ ವಿಕ್ರಮ್ ಇಲ್ಲಿಯವರೆಗೆ ಬಂಧನದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಪದೇ ಪದೇ ಸ್ಥಳ ಬದಲಾಯಿಸುತ್ತಲೇ ಇದ್ದ ವಿಕ್ರಂ ಮುಜಾಫರ್ ನಗರದಿಂದ ಉತ್ತರ ಪ್ರದೇಶದ ಹಾಪುರ್‌ಗೆ ತನ್ನ ನೆಲೆಯನ್ನು ಬದಲಾಯಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೇಯಸಿಯ ತಾಯಿ ಜೊತೆಗೆ ಲಿವ್-ಇನ್ ಸಂಗಾತಿಯಾಗಿದ್ದ ಕೊಲೆಗಾರ

2008ರಲ್ಲಿ ಜರುಗಿದ ಈ ಕಥೆಯಲ್ಲಿ ರಾಬಿನ್ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದ ಹಾಗೂ ಇದೇ ವೇಳೆ ಆಕೆಯ ವಿಚ್ಚೇದಿತ ತಾಯಿ ರೇಣು, ಮುನ್ನಾ ಸಿಂಗ್ (45) ಎಂಬ ಲಿವ್‌-ಇನ್ ಸಂಗಾತಿಯನ್ನು ಹೊಂದಿದ್ದಳು. ರೇಣು ಮತ್ತು ಮುನ್ನಾ‌, ರಾಬಿನ್ ಜೊತೆಗಿನ ರೇಣು ಮಗಳ ಸಂಬಂಧವನ್ನು ವಿರೋಧಿಸಿದ್ದರು ಮತ್ತು ಆತನನ್ನು ಭೇಟಿಯಾಗದಂತೆ ಆಕೆಯನ್ನು ತಡೆದಿದ್ದರು.

ಮತ್ತೊಂದೆಡೆ, ರಾಬಿನ್‌ಗೆ ಮುನ್ನಾ ತನ್ನ ಮತ್ತು ತನ್ನ ಗೆಳತಿಯ ಮೇಲೆ ಕೆಲವು ದುರುದ್ದೇಶಗಳನ್ನು ಹೊಂದಿದ್ದಾನೆ ಎಂದು ಅನುಮಾನ ಬಂತು. ಡಿಸೆಂಬರ್ 2008 ರಲ್ಲಿ, ರಾಬಿನ್ ಮತ್ತವನ ಗೆಳತಿ ಒಂದು ದೊಡ್ಡ ಜಗಳ ಆಡಿಕೊಂಡಿದ್ದರು. ಅದರ ನಂತರ ರಾಬಿನ್ ಮುನ್ನಾನನ್ನು ಕೊಲ್ಲಲು ಆಲೋಚಿಸಿದ.

ʼಸ್ನಾನʼ ಮಾಡುವ ರೀತಿ ಮೇಲೂ ಅವಲಂಬಿಸಿದೆಯಂತೆ ಆಯುಷ್ಯ….!

ಕೊಲೆಗೆ ಆಯುಧ ಏರ್ಪಾಡು ಮಾಡಿದ್ದ ವಿಕ್ರಂ

ಕೋಪಗೊಂಡಿದ್ದ ರಾಬಿನ್ ವಿಕ್ರಮ್ ನನ್ನು ಸಂಪರ್ಕಿಸಿ ಮುನ್ನಾನನ್ನು ಕೊಲೆ ಮಾಡಲು ಆಯುಧದ ವ್ಯವಸ್ಥೆ ಮಾಡುವಂತೆ ಕೇಳಿಕೊಂಡ. ವಿಕ್ರಮ್ ಮುಜಾಫರ್ ನಗರದ ನಿವಾಸಿಯೊಬ್ಬನನ್ನು ಸಂಪರ್ಕಿಸಿ ಆತನಿಗೆ ಆಯುಧದ ವ್ಯವಸ್ಥೆ ಮಾಡಿದ್ದಾನೆ.

ಸೆಪ್ಟೆಂಬರ್ 2008ರ ದಿನವೊಂದರ ಬೆಳಿಗ್ಗೆ ಸುಮಾರು 8 ಗಂಟೆಗೆ, ರೇಣು ಮನೆಯ ಹೊರಗೆ ತನ್ನ ಕಾರು ಸ್ವಚ್ಛಗೊಳಿಸುತ್ತಿದ್ದ ಮುನ್ನಾನ ಎದೆ ಮತ್ತು ಹೊಟ್ಟೆಗೆ ರಾಬಿನ್ ಗುಂಡು ಹಾರಿಸಿದ್ದಾನೆ. ಕೂಡಲೇ ಮುನ್ನಾನನ್ನು ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಆತನ ಅಲ್ಲಿ ಮೃತಪಟ್ಟ.

ಘಟನೆಯ ನಂತರ, ರಾಬಿನ್ ಮುಜಾಫರ್‌ನಗರದಲ್ಲಿರುವ ವಿಕ್ರಮ್‌ನ ಮನೆಯಲ್ಲಿ ಸ್ವಲ್ಪ ಕಾಲ ಇದ್ದ. ಅಕ್ಟೋಬರ್ 2008ರಲ್ಲಿ ಆತನನ್ನು ಬಂಧಿಸಲಾಯಿತು. ತನಿಖೆ ವೇಳೆ ರಾಬಿನ್, ವಿಕ್ರಮ್ ಹೆಸರನ್ನು ಬಹಿರಂಗಪಡಿಸಿದ್ದರೂ ಸಹ ಆತನನ್ನು ಬಂಧಿಸಲು ಪೊಲೀಸರು ವಿಫಲರಾಗಿದ್ದರು.

ಆದಾಗ್ಯೂ, ಫೆಬ್ರವರಿ 17, 2022 ರಂದು, ಪಕ್ಕಾ ಸುಳಿವಿನ ಮೇರೆಗೆ ಬಲೆ ಬೀಸಿದ ಪೊಲೀಸರು, ಕರ್ನಾಲ್‌ನಲ್ಲಿರುವ ತನ್ನ ಅಡಗುತಾಣದಿಂದ ವಿಕ್ರಮ್‌ನನ್ನು ಬಂಧಿಸಿದ್ದಾರೆ. ಪಾಣಿಪತ್, ಕರ್ನಾಲ್ ಮತ್ತು ಪಂಚಕುಲ ಮತ್ತು ಹರಿಯಾಣದ ಇತರ ಭಾಗಗಳಲ್ಲಿ ಸಾಕಷ್ಟು ಆಸ್ತಿಗಳನ್ನು ಹೊಂದಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...