alex Certify BIG BREAKING: ‘ಕರ್ತವ್ಯ ಪಥ’ ಉದ್ಘಾಟಿಸಿದ ಪ್ರಧಾನಿ ಮೋದಿ: ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ‘ಕರ್ತವ್ಯ ಪಥ’ ಉದ್ಘಾಟಿಸಿದ ಪ್ರಧಾನಿ ಮೋದಿ: ಸುಭಾಷ್ ಚಂದ್ರ ಬೋಸ್ ಪ್ರತಿಮೆ ಅನಾವರಣ

ನವದೆಹಲಿ: ದೆಹಲಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಕರ್ತವ್ಯ ಪಥ’ ಉದ್ಘಾಟಿಸಿದ್ದಾರೆ. ರಾಜಪಥ ಎಂದು ಕರೆಯಲ್ಪಡುತ್ತಿದ್ದ ಕರ್ತವ್ಯ ಪಥವನ್ನು ಸಮಗ್ರ ಅಭಿವೃದ್ಧಿಪಡಿಸಲಾಗಿದೆ.

ವಿಜಯ ಚೌಕ್ ಮತ್ತು ಇಂಡಿಯಾ ಗೇಟ್ ಸಂಪರ್ಕಿಸುವ ರಸ್ತೆ ಇದಾಗಿದೆ. ಕರ್ತವ್ಯ ಪಥದಲ್ಲಿ ನೂತನವಾಗಿ ನಿರ್ಮಿಸಲಾದ ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು ಪ್ರಧಾನಿ ಅನಾವರಣಗೊಳಿಸಿದ್ದಾರೆ.  ಏಕಶಿಲೆಯ ಗ್ರಾನೆಟ್ ಕಲ್ಲಿನಲ್ಲಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. 65 ಮೆಟ್ರಿ ಟನ್ ತೂಕ ಹೊಂದಿರುವ ಪ್ರತಿಮೆ ಇದಾಗಿದೆ. ಕಳೆದ ವರ್ಷ ಹಾಲೊಗ್ರಾಂ ಪ್ರತಿಮೆಯನ್ನು ಉದ್ಘಾಟಿಸಲಾಗಿತ್ತು.

ಸುಮಾರು 3.20 ಕಿಲೋಮೀಟರ್ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ನವೀಕೃತ ಸೆಂಟ್ರಲ್ ವಿಸ್ತಾದ ಕೆಲವು ಭಾಗ, ಕರ್ತವ್ಯ ಪಥ ಹಾಗೂ ಇಂಡಿಯಾ ಗೇಟ್ ಸಮೀಪ ಪ್ರತಿಷ್ಠಾಪಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು ಪ್ರಧಾನಿ ಲೋಕಾರ್ಪಣೆಗೊಳಿಸಿದರು. ಮೈಸೂರಿನ ಶಿಲ್ಪಿ ಅರುಣ್ ಯೋಗರಾಜ್ ಪ್ರತಿಮೆ ಕೆತ್ತಿದ್ದಾರೆ. ಅವರು ಕೇದಾರನಾಥದಲ್ಲಿ ಶಂಕರಾಚಾರ್ಯರ ಪ್ರತಿಮೆ ಕೆತ್ತಿದ ಶಿಲ್ಪಿಯಾಗಿದ್ದಾರೆ.

ವಿಜಯ ಚೌಕ್ ನಿಂದ ಇಂಡಿಯಾ ಗೇಟ್ ವರೆಗಿನ ಕರ್ತವ್ಯ ಪಥ ದಲ್ಲಿ ಗ್ರಾನೈಟ್ ಪಾದಚಾರಿ ಮಾರ್ಗಗಳು, ರಾಜ್ಯವಾರು ಆಹಾರ ಮಳಿಗೆಗಳು, ಹಸಿರು ಉದ್ಯಾನವನಗಳು ಪ್ರಮುಖ ಆಕರ್ಷಣೆಯಾಗಿವೆ. 900 ಹೊಸ ಬೆಳಕಿನ ಕಂಬಗಳು ಇದ್ದು, ಬಣ್ಣದ ಕಾರಂಜಿ ನಿರ್ಮಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...