alex Certify 2 ತಿಂಗಳ ಮಗುವಿಗೆ ನರ್ಸ್ ಮಾಡಿದ್ದೇನು…? ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2 ತಿಂಗಳ ಮಗುವಿಗೆ ನರ್ಸ್ ಮಾಡಿದ್ದೇನು…? ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ

ರಾಷ್ಟ್ರ ರಾಜಧಾನಿ ದೆಹಲಿಯ ಆಸ್ಪತ್ರೆಯಲ್ಲಿ ನರ್ಸ್ ಮಾಡಿದ ಕೃತ್ಯವೊಂದು ಬೆಚ್ಚಿ ಬೀಳಿಸುವಂತಿದೆ. ನರ್ಸ್ 2 ತಿಂಗಳ ಮಗುವಿಗೆ ಥಳಿಸಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಜುಲೈ 24 ರಾತ್ರಿ ನಡೆದಿದೆ ಎನ್ನಲಾಗ್ತಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಯುಪಿಯ ಹತ್ರಾಸ್‌ ಕುಟುಂಬವೊಂದು, 2 ತಿಂಗಳ ಮುಗ್ಧ ಮಗುವನ್ನು ದೆಹಲಿಯ ವಿವೇಕ್ ವಿಹಾರ್‌ನಲ್ಲಿರುವ ನರ್ಸಿಂಗ್ ಹೋಂಗೆ ಚಿಕಿತ್ಸೆಗಾಗಿ ದಾಖಲಿಸಿತ್ತು. ನರ್ಸಿಂಗ್ ಹೋಂನಲ್ಲಿರುವ ಮಗುವನ್ನು ನೋಡಲು ತಂದೆ ದಿನಕ್ಕೆ ಒಮ್ಮೆ ಬರುತ್ತಿದ್ದ. ಪಾಲಕರು ಉಳಿಯಲು ಅವಕಾಶವಿರದ ಕಾರಣ ಆತ ದಿನಕ್ಕೊಮ್ಮೆ ಬಂದು ಹೋಗ್ತಿದ್ದ. ಜುಲೈ 24 ರಂದು, ಮಗನಿಗೆ ಗಾಯವಾಗಿದೆ ಎಂದು ನರ್ಸಿಂಗ್ ಹೋಂನವರು ತಿಳಿಸಿದ್ದರು. ಮಗುವಿನ ಬಾಯಿ ಊದಿಕೊಂಡಿತ್ತು.

ತಂದೆಯ ಮನವಿ ಮೇರೆಗೆ ನರ್ಸಿಂಗ್ ಹೋಂನ ಸಿಸಿ ಟಿವಿ ಕ್ಯಾಮರಾದ ದೃಶ್ಯಗಳನ್ನು ಪರಿಶೀಲಿಸಲಾಗಿದೆ. ಆಗ ನರ್ಸ್ ಕೃತ್ಯ ಹೊರ ಬಂದಿದೆ. ನರ್ಸ್, ಮಗುವಿಗೆ ಮನ ಬಂದಂತೆ ಥಳಿಸಿದ್ದಾಳೆ. ದೃಶ್ಯ ನೋಡಿ ಆತಂಕಗೊಂಡ ತಂದೆ, ವಿವೇಕ್ ವಿಹಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಗುವಿನ ತಂದೆ ಸಬೀಬ್ ಪ್ರಕಾರ, ಅವರ ಪತ್ನಿ ಗುಲಾಫ್ಶಾ ಮೇ 22 ರಂದು ಹತ್ರಾಸ್ ಆಸ್ಪತ್ರೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಜುಲೈ 16 ರಂದು, ಮಗ ಅಹನ್‌ನ ಆರೋಗ್ಯ ಹದಗೆಟ್ಟಿತ್ತು. ಅಲಿಗಢದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಸೌಲಭ್ಯವಿಲ್ಲದ ಕಾರಣ ದೆಹಲಿಯ ವಿವೇಕ್ ವಿಹಾರ್‌ನಲ್ಲಿರುವ ಕೇರ್ ನ್ಯೂ ಬಾರ್ನ್ ಮತ್ತು ಚೈಲ್ಡ್ ಸೆಂಟರ್‌ಗೆ ರವಾನೆ ಮಾಡಲಾಗಿತ್ತು.

ಜುಲೈ 24 ರಂದು ಬೆಳಗಿನ ಜಾವ 3:40 ಕ್ಕೆ ಸೌಮ್ಯ ಎಂಬ ನರ್ಸ್ ಮಗುವನ್ನು ಥಳಿಸಿದ್ದಾಳೆ ಎಂದು ಸಬೀಬ್ ಆರೋಪ ಮಾಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...