ಪ್ರತಿಯೊಬ್ಬರೂ ಫುಡ್ ಡೆಲಿವರಿ ಅಪ್ಲಿಕೇಷನ್ಗಳ ಮೂಲಕ ಫುಡ್ ಆರ್ಡರ್ ಮಾಡುವುದರೊಂದಿಗೆ, ಕಾಯುವ ಸಮಯವನ್ನು ಗಮನಿಸುತ್ತಿರುತ್ತಾರೆ. ಮಹಾನಗರಗಳಲ್ಲಿ ಸಹಜವಾಗಿ ರಸ್ತೆಯ ದಟ್ಟಣೆಯು ಕಾಯುವಿಕೆಯನ್ನು ಹೆಚ್ಚು ಮಾಡುತ್ತದೆ.
ಇಲ್ಲೊಬ್ಬ ಗ್ರಾಹಕ ಮಹಾಶಯ, ತಾನು ಆರ್ಡರ್ ಮಾಡಿದ್ದ ಫುಡ್ ಸಮಯಕ್ಕೆ ಸರಿಯಾಗಿ ಬರಲಿಲ್ಲ ಎಂದು ಫುಡ್ ಡೆಲಿವರಿ ಪ್ರತಿನಿಧಿಗೆ ಆರತಿ ಎತ್ತಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.
ದಸರಾದಲ್ಲಿ ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಫುಡ್ ಡೆಲಿವರಿ ಪ್ರತಿನಿಧಿ ಒಂದು ಗಂಟೆ ತಡವಾಗಿ ಗ್ರಾಹಕನ ವಿಳಾಸಕ್ಕೆ ತಲುಪಿದ್ದಾನೆ. ಈ ವೇಳೆ ರೋಸಿ ಹೋಗಿದ್ದ ಗ್ರಾಹಕ, ಚಲನಚಿತ್ರದ ಫೀಲಿಂಗ್ನಲ್ಲಿ ಸ್ವಾಗತಿಸುತ್ತಿರುವುದನ್ನು ಕ್ಲಿಪ್ ತೋರಿಸುತ್ತದೆ.
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾದ ಕ್ಲಿಪ್ನಲ್ಲಿ ಆರ್ಡರ್ನೊಂದಿಗೆ ಆಗಮಿಸುವ ಡೆಲಿವರಿ ಏಜೆಂಟ್ನೊಂದಿಗೆ ಆರಂಭವಾಗುತ್ತದೆ. ಮನೆ ಬಾಗಿಲನ್ನು ತಲುಪಿದ ನಂತರ, ಆ ಗ್ರಾಹಕ ವಿಜಯಪಥ್ ಚಲನಚಿತ್ರದ ಕುಮಾರ್ ಸಾನು ಅವರ ಆಯಿಯೇ ಆಪ್ಕಾ ಇಂತಜಾರ್ ತಾ ಹಾಡನ್ನು ಹಾಡಲು ಪ್ರಾರಂಭಿಸುತ್ತಾನೆ. ನಂತರ ಅವರು ಆಹಾರವನ್ನು ಸ್ವೀಕರಿಸುವ ಮೊದಲು ಡೆಲಿವರಿ ಬಾಯ್ನ ಹಣೆಯ ಮೇಲೆ ತಿಲಕವನ್ನೂ ಇಟ್ಟರು.
ತಿಲಕ ಇಡಲು ಬಂದಾಗ ಹೆಲ್ಮೆಟ್ ತೆಗೆದು ಅನಿರೀಕ್ಷಿತ ಸ್ವಾಗತದ ನಂತರ ಮುಖದಲ್ಲಿ ನಗುವಿನೊಂದಿಗೆ ಡೆಲಿವರಿ ಬಾಯ್ ಕೂಡ ಕ್ರೀಡಾ ಮನೋಭಾವವನ್ನು ತೋರಿಸಿದ್ದಾರೆ. ಇನ್ನು ಒಂದು ಗಂಟೆಯಿಂದ ಕಾಯುತ್ತಿರುವಾಗ ದೆಹಲಿಯ ಟ್ರಾಫಿಕ್ ಹೊರತಾಗಿಯೂ ಆರ್ಡರ್ ಪಡೆಯಲಾಗುತ್ತಿದೆ. ಧನ್ಯವಾದ ಝೊಮಾಟೊ ಎಂದು ಪೋಸ್ಟ್ನ ಶೀಷಿರ್ಕೆ ಇದೆ.
ನಗುವ ಎಮೋಜಿಗಳೊಂದಿಗೆ ಕಾಮೆಂಟ್ ವಿಭಾಗವನ್ನು ತುಂಬಿದ ಇನ್ಸ್ಟಾಗ್ರಾಮ್ ಬಳಕೆದಾರರು, ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ಈ ವಿಡಿಯೋ 4.6 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.