alex Certify ರೆಸ್ಟೋರೆಂಟ್‌ ಕಳಿಸಿದ ಆನಿಯನ್ ರಿಂಗ್ ನೋಡಿ ಪೆಚ್ಚಾದ ಗ್ರಾಹಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೆಸ್ಟೋರೆಂಟ್‌ ಕಳಿಸಿದ ಆನಿಯನ್ ರಿಂಗ್ ನೋಡಿ ಪೆಚ್ಚಾದ ಗ್ರಾಹಕ

ಹಸಿದ ಹೊತ್ತಿನಲ್ಲಿ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿ, ಡೆಲವರಿ ಬಂದಾಗ ತಪ್ಪಾದ ಐಟಂ ಸ್ವೀಕರಿಸಿದರೆ ಎಂತವರ ತಾಳ್ಮೆಯೂ ಕೆಡುತ್ತದೆ.

ಇಲ್ಲಾಗಿದ್ದೂ ಅದೇ. ದೆಹಲಿಯ ರೆಸ್ಟೋರೆಂಟ್ ಒಂದು ಗ್ರಾಹಕನಿಗೆ ಹಸಿ ಈರುಳ್ಳಿ ಸುರುಳಿಯನ್ನು ಕಳಿಸಿ ಬೆಚ್ಚಿ ಬೀಳಿಸಿದೆ.

ಉಬೈದ್ ಎಂಬ ವ್ಯಕ್ತಿ ಆನಿಯನ್ ರಿಂಗ್ ಆರ್ಡರ್ ಮಾಡಿದ್ದರು. ಆದರೆ ಅವರು ಕಚ್ಛಾ ಈರುಳ್ಳಿಯನ್ನು ಡೆಲಿವರಿ ಪಡೆದರು. ಬಳಿಕ ಅವರು ತಾನು ಪೇಚಿಗೆ ಸಿಲುಕಿದ ಸಂಗತಿಯನ್ನು ರೀಲ್ ಮಾಡಿ ಇನ್ ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.

BIG NEWS: ಹೊಸದಾಗಿ ಚುನಾಯಿತರಾದ ರಾಜ್ಯಸಭಾ ಸದಸ್ಯರಲ್ಲಿ ಶೇ.40 ರಷ್ಟು ಮಂದಿ ಮೇಲಿದೆ ಕ್ರಿಮಿನಲ್ ಕೇಸ್

ವೈರಲ್ ಆಗಿರುವ ವೀಡಿಯೊದಲ್ಲಿ, ಉಬೈದ್ ತನ್ನ ಸಂಕಟವನ್ನು ಮಾತನಾಡದೇ ಸನ್ನೆಯಲ್ಲೇ ವಿವರಿಸಿದ್ದಾನೆ. “ಗೈಸ್, ನಾನು ಆನಿಯನ್ ರಿಂಗ್ ಆರ್ಡರ್ ಮಾಡಿದ್ದೆ ಮತ್ತು ಇದು ನನಗೆ ಸಿಕ್ಕಿತು” ಎಂದು ಕ್ಲಿಪ್ನಲ್ಲಿನ ಶೀರ್ಷಿಕೆ ಇದೆ.

ನಂತರ ಆತ ಕ್ಯಾಮರಾ ನೋಡಿ ನಗುತ್ತಾ ಅದನ್ನು ಉಂಗುರದಂತೆ ಬೆರಳಿಗೆ ಹಾಕಿದ.‌ ಉಬೈದ್ ರೆಸ್ಟೋರೆಂಟ್‌ನ ಹೆಸರನ್ನು ಉಲ್ಲೇಖಿಸಲಿಲ್ಲ.

ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವೀಡಿಯೊ ಸುಮಾರು 20 ಸಾವಿರ ವೀಕ್ಷಣೆ ಗಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...