ಮಹಿಳೆಯನ್ನ ಅತ್ಯಾಚಾರ ಮಾಡಿ ಬಳಿಕ ಆಕೆಯನ್ನೇ ವಿವಾಹವಾಗಿದ್ದ ವ್ಯಕ್ತಿ ಪತ್ನಿಯನ್ನ ಕೊಲೆ ಮಾಡಿ ಜೈಲು ಪಾಲಾಗಿದ್ದಾನೆ.
ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಆರೋಪಿ ಕಳೆದ ವರ್ಷ ಡಿಸೆಂಬರ್ನಲ್ಲಿ ಸಂತ್ರಸ್ತೆಯನ್ನು ವಿವಾಹವಾಗಿದ್ದ. ಮದುವೆಯಾಗಿ ಆರು ತಿಂಗಳಲ್ಲೇ ಪತ್ನಿಯನ್ನೇ ಕೊಲೆ ಮಾಡಿ ಆಕೆಯ ಶವವನ್ನ ನೈನಿತಾಲ್ – ಹಲ್ದ್ವಾನಿ ಹೆದ್ದಾರಿಯಲ್ಲಿ ಎಸೆದಿದ್ದ ಎನ್ನಲಾಗಿದೆ.
ಪ್ರಕರಣ ಸಂಬಂಧ ಪೊಲೀಸರ ತಂಡದ ಮುಂದಾಳತ್ವ ವಹಿಸಿದ್ದ ಎಸ್ಐ ನರೇಂದ್ರ ಸಿಂಗ್ ಈ ವಿಚಾರವಾಗಿ ಮಾತನಾಡಿದ್ದು, ಅತ್ಯಾಚಾರ ಎಸಗಿದ್ದ ಆರೋಪದಡಿಯಲ್ಲಿ ಈ ಆರೋಪಿಯನ್ನ ಬಂಧಿಸಿ ಜೈಲಿಗಟ್ಟಲಾಗಿತ್ತು. ಇದಾದ ಬಳಿಕ ತಾನು ಬಬಿತಾಳನ್ನೇ ವಿವಾಹವಾಗುತ್ತೇನೆ ಎಂದು ರಾಜೇಶ್ ಅಫಿಡವಿಡ್ ಸಲ್ಲಿಸಿದ ಬಳಿಕ ರಾಜೇಶ್ರನ್ನ ಜೈಲಿನಿಂದ ಹೊರಗೆ ಬಂದಿದ್ದ. ಇವರಿಬ್ಬರು ಕಳೆದ ವರ್ಷ ಡಿಸೆಂಬರ್ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಕಳೆದ ತಿಂಗಳು ಬಬಿತಾ ಕುಟುಂಬಸ್ಥರು ಆಕೆ ನಾಪತ್ತೆಯಾಗಿದ್ದಾಳೆ ಎಂದು ಪ್ರಕರಣ ದಾಖಲಿಸಿದ್ದರು ಎಂದು ಮಾಹಿತಿ ನೀಡಿದ್ರು.
ಜೂನ್ 11ನೇ ತಾರೀಖಿನಂದು ಬಬಿತಾ ಕಾಣೆಯಾಗಿದ್ದಾಳೆ ಎಂದು ದೆಹಲಿಯ ದ್ವಾರಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದಾದ ಬಳಿಕ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆಕೆಯ ಫೋನ್ ಕಾಲ್ಗಳನ್ನ ಆಲಿಸಿದ್ದಾರೆ. ಈ ಮೊಬೈಲ್ ಫೋನ್ನಲ್ಲಿ ಕೊನೆಯ ಲೊಕೇಷನ್ ಜೂನ್ 12ನೇ ತಾರೀಖನ್ನು ತೋರಿಸುತ್ತಿತ್ತು. ಈಕೆ ನೈನಿತಾಲ್ನ ಹನುಮಾನ್ಗಢ್ ದೇವಸ್ಥಾನದಲ್ಲಿ ಕೊನೆಯ ಸ್ಥಳ ತೋರಿಸುತ್ತಿತ್ತು. ವಿಪರ್ಯಾಸ ಅಂದರೆ ಇದೇ ಸಮಯದಲ್ಲಿ ರಾಜೇಶ್ ಮೊಬೈಲ್ನಲ್ಲೂ ಇದೇ ಸ್ಥಳ ತೋರಿಸಿದೆ. ಇದಾದ ಬಳಿಕ ರಾಜೇಶ್ಗೆ ಪೊಲೀಸರು ಡ್ರಿಲ್ ಮಾಡುತ್ತಿದ್ದಂತೆಯೇ ಆತ ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಬಬಿತಾ ಹಾಗೂ ಆಕೆಯ ತಾಯಿ ನನಗೆ ಹಿಂಸೆ ನೀಡುತ್ತಿದ್ದರು ಹೀಗಾಗಿ ನಾನು ಪತ್ನಿಯನ್ನ ಕೊಲೆ ಮಾಡಿದ್ದಾಗಿ ಪೊಲೀಸರ ಎದುರು ರಾಜೇಶ್ ತಪ್ಪೊಪ್ಪಿಕೊಂಡಿದ್ದಾನೆ.