alex Certify ಅಪರೂಪದ ಕಣ್ಣಿನ ಕಾಯಿಲೆಯಿಂದ ಬಾಲಕಿ ಪಾರು ಮಾಡಿದ ವೈದ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಕಣ್ಣಿನ ಕಾಯಿಲೆಯಿಂದ ಬಾಲಕಿ ಪಾರು ಮಾಡಿದ ವೈದ್ಯರು

Delhi Hospital Doctors Restore Vision of 13-Year-Old Suffering From Rare Eye Disease

ದೆಹಲಿ: ಕ್ಷಯರೋಗದಿಂದ ಉಂಟಾದ ಅಪರೂಪದ ಕಣ್ಣಿನ ಉರಿಯೂತದಿಂದ ಬಳಲುತ್ತಿದ್ದ 13 ವರ್ಷದ ಬಾಲಕಿಯೊಬ್ಬಳು ಅಂಧತ್ವದಿಂದ ಪಾರಾಗಿದ್ದು, ಈಕೆಗೆ ಅಗತ್ಯ ಚಿಕಿತ್ಸೆ ನೀಡಿ ದೃಷ್ಟಿ ಮರಳಿಸುವಲ್ಲಿ ದೆಹಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಯಶಸ್ವಿಯಾಗಿದ್ದಾರೆ.

ಕಣ್ಣಿನ ತೊಂದರೆಯಿಂದ ಬಳಲುತ್ತಿದ್ದ ಬಾಲಕಿಯನ್ನು ದ್ವಾರಕಾದ ಆಕಾಶ್ ಹೆಲ್ತ್‌ ಕೇರ್‌ನ ನೇತ್ರಶಾಸ್ತ್ರ ವಿಭಾಗಕ್ಕೆ ದಾಖಲಿಸಲಾಯಿತು. ಆಸ್ಪತ್ರೆಗೆ ಭೇಟಿ ನೀಡಿದಾಗ ಆಕೆಯ ಪೋಷಕರು ವೈರಸ್‌ಗೆ ತುತ್ತಾಗಬಹುದೆಂದು ಹೆದರುತ್ತಿದ್ದ ಕಾರಣ ಬಾಲಕಿ ಎಡಗಣ್ಣಿನಲ್ಲಿ ಶೇಕಡಾ 40 ರಷ್ಟು ಮತ್ತು ಬಲಗಣ್ಣಿನಲ್ಲಿ ಶೇಕಡಾ 20 ರಷ್ಟು ದೃಷ್ಟಿ ಕಳೆದುಕೊಂಡಿದ್ದಳು. ನಂತರ ಬಾಲಕಿಗೆ ಸಮರ್ಪಕ ಚಿಕಿತ್ಸೆ ನೀಡಿದ ಆಸ್ಪತ್ರೆ ವೈದ್ಯರು, ಕ್ಷಯರೋಗದಿಂದ ಉಂಟಾಗುವ ಅಪರೂಪದ ಕಣ್ಣಿನ ಉರಿಯೂತದಿಂದ ಬಳಲುತ್ತಿರುವ ಬಾಲಕಿಗೆ ಎರಡೂ ಕಣ್ಣುಗಳಲ್ಲಿ ಸಂಪೂರ್ಣ ದೃಷ್ಟಿಯನ್ನು ಮರಳಿಸುವಲ್ಲಿ ಯಶಸ್ವಿಯಾಯಿತು ಎಂದು ಆಸ್ಪತ್ರೆ ಹೇಳಿದೆ.

ದೇಶದಲ್ಲಿ ಕೊರೋನ ಎರಡನೇ ಅಲೆ ಉತ್ತುಂಗದಲ್ಲಿದ್ದ ಕಾರಣ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲು ಮೊದಲಿಗೆ ಪೋಷಕರು ಹಿಂದೇಟು ಹಾಕಿದ್ದರು. ಸುಮಾರು ಆರು ದಿನಗಳ ಕಾಲ ಬಾಲಕಿಯ ಕಣ್ಣುಗಳು ಕೆಂಪಾಗಿದ್ದವು ಎಂದು ವೈದ್ಯರು ಹೇಳಿದ್ದಾರೆ. ಆದರೆ, ಆಕೆಯ ಪೋಷಕರು ಇದು ಸೌಮ್ಯವಾದ ಕಣ್ಣು ನೋವು ಎಂದೇ ಭಾವಿಸಿದ್ದರಂತೆ. ಆಕೆಯ ದೃಷ್ಟಿ ಕ್ಷಿಪ್ರವಾಗಿ ಕುಸಿದಿದ್ದರಿಂದ ಕುಟುಂಬದಲ್ಲಿ ಭೀತಿ ಉಂಟುಮಾಡಿತ್ತು. ಹೀಗಾಗಿ ಈಕೆಯನ್ನು ತುರ್ತಾಗಿ ಆಸ್ಪತ್ರೆಗೆ ಕರೆತರಲಾಯಿತು.

ಮೇ ಮೊದಲ ವಾರದಲ್ಲಿ ಬಾಲಕಿಯ ಕಣ್ಣುಗಳಲ್ಲಿ ಕೆಂಪು ಮತ್ತು ನೋವು ಕಾಣಿಸಿಕೊಂಡಿದೆ. ಅಲ್ಲದೆ ಎರಡೂ ಕಣ್ಣುಗಳಲ್ಲಿ ದೃಷ್ಟಿ ಕ್ಷೀಣಿಸಿದೆ. ಇದರಿಂದ ಈಕೆಯಲ್ಲಿ ಗ್ರ್ಯಾನುಲೋಮಾಟಸ್ ಪನುವೈಟಿಸ್ ಇರುವುದು ಪತ್ತೆಯಾಯಿತು. ಭಾರತದಲ್ಲಿ ಸುಮಾರು ಆರರಿಂದ ಏಳು ಪ್ರತಿಶತದಷ್ಟು ಮಕ್ಕಳ ಮೇಲೆ ಪರಿಣಾಮ ಬೀರುವ ಕಣ್ಣಿನ ಉರಿಯೂತ ಇದಾಗಿದೆ.

BIG NEWS: ಭೀಕರ ಅಪಘಾತ; ರಸ್ತೆ ಮಧ್ಯೆಯೇ ಪಲ್ಟಿಯಾದ ಆಟೋ; ಮೂವರ ದುರ್ಮರಣ

ಗ್ರ್ಯಾನುಲೋಮಾಟಸ್ ಯುವೆಟಿಸ್ ಎಂಬುದು ಗ್ರ್ಯಾನುಲೋಮಾಗಳ ರಚನೆಯೊಂದಿಗೆ ಯುವೆಲ್ (ಐರಿಸ್) ಪ್ರದೇಶದ ಉರಿಯೂತವಾಗಿದೆ. ಇದು ಸಾಂಕ್ರಾಮಿಕ ಅಥವಾ ಸಾಂಕ್ರಾಮಿಕವಲ್ಲದ ಕಾರಣದಿಂದಾಗಿರಬಹುದು. ಯುವೆಟಿಸ್ ಮಕ್ಕಳಲ್ಲಿ ಅಸಾಮಾನ್ಯವಾಗಿದೆ. ಇದು ಕೇವಲ ಐದರಿಂದ 10 ಪ್ರತಿಶತದಷ್ಟು ಮಾತ್ರ ಕಂಡುಬರುತ್ತದೆ. ಗ್ರ್ಯಾನುಲೋಮಾಟಸ್ ಯುವೆಟಿಸ್ ಇನ್ನೂ ವಿರಳವಾಗಿದೆ ಮತ್ತು ಸಾಮಾನ್ಯವಾಗಿ ಕ್ಷಯ, ಸಂಧಿವಾತ ಅಥವಾ ಕ್ಯಾನ್ಸರ್ ನಂತಹ ಮೂಲ ಕಾರಣವನ್ನು ಹೊಂದಿರಬಹುದು. ಕೇವಲ ಒಂದು ಕಣ್ಣಿನಲ್ಲಿ ದೃಷ್ಟಿ ಕಡಿಮೆಯಾದರೆ, ಚಿಕ್ಕ ಮಕ್ಕಳು ಇದನ್ನು ಅರಿತುಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಅವರು ಇನ್ನೊಂದು ಕಣ್ಣಿನಿಂದ ಚೆನ್ನಾಗಿ ನೋಡುವುದನ್ನು ಮುಂದುವರಿಸುತ್ತಾರೆ, ಇದು ಕುರುಡುತನಕ್ಕೆ ಕಾರಣವಾಗಬಹುದು ಎಂದು ಆಸ್ಪತ್ರೆ ತಿಳಿಸಿದೆ.

ಇನ್ನು ಬಾಲಕಿಯ ಪೋಷಕರು ಈಕೆಯನ್ನು ಶೀಘ್ರವಾಗಿ ಆಸ್ಪತ್ರೆಗೆ ಕರೆದೊಯ್ಯಲಿಲ್ಲ. ಇದು ಸಾಮಾನ್ಯವಾಗಿ ಜನರು ಮಾಡುವ ತಪ್ಪಾಗಿದೆ. ಅಲ್ಲದೆ ಕ್ಷಯರೋಗವು ಶ್ವಾಸಕೋಶದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಎಂಬುದು ನಿಜವಲ್ಲ. ಇದು ಮೂಳೆಗಳು, ಕಣ್ಣುಗಳು, ಕರುಳುಗಳು ಮತ್ತು ಇತರ ಅಂಗಗಳ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ ಸ್ವಲ್ಪ ಹೆಚ್ಚು ಕಮ್ಮಿಯಾದ್ರೂ ಅಂಧತ್ವ ಆವರಿಸಬಹುದು ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...