alex Certify ಯೋಗ ಗುರು ಬಾಬಾ ರಾಮದೇವ್​ ವಿರುದ್ಧ ದೆಹಲಿ ಹೈಕೋರ್ಟ್​ನಿಂದ ನೋಟಿಸ್​ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯೋಗ ಗುರು ಬಾಬಾ ರಾಮದೇವ್​ ವಿರುದ್ಧ ದೆಹಲಿ ಹೈಕೋರ್ಟ್​ನಿಂದ ನೋಟಿಸ್​ ಜಾರಿ

ಅಲೋಪಥಿ ವೈದ್ಯ ಪದ್ಧತಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೋಗಗುರು ಬಾಬಾ ರಾಮದೇವ್​​ ವಿರುದ್ಧ ದೆಹಲಿ ಹೈಕೋರ್ಟ್​ ನೋಟಿಸ್​ ಜಾರಿ ಮಾಡಿದೆ. ಕೋವಿಡ್​ 19 ಚಿಕಿತ್ಸೆಯ ವಿಚಾರದಲ್ಲಿ ವೈದ್ಯರ ನಡೆಯ ಬಗ್ಗೆ ರಾಮದೇವ್​ ಕಿಡಕಾರಿದ್ದರು.

ತಪ್ಪಾದ ಮಾಹಿತಿಯನ್ನು ಹರಡುತ್ತಿದ್ದಾರೆ ಎಂಬ ಕಾರಣವನ್ನು ನೀಡಿ ದೆಹಲಿ ಹೈಕೋರ್ಟ್​ ಈ ನೋಟಿಸ್​ನ್ನು ಜಾರಿ ಮಾಡಿದೆ. ಈ ಸಂಬಂಧ ಆಗಸ್ಟ್ 10ರಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದ್ದಂತೆಯೇ ಬಾಬಾ ರಾಮದೇವ್​ ಅಲೋಪಥಿ ವೈದ್ಯ ಪದ್ಧತಿ ವಿರುದ್ಧ ತಾವು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆದಿದ್ದರು. ಅಲೋಪಥಿ ವೈದ್ಯ ಪದ್ಧತಿಯ ವಿರುದ್ಧ ಕಿಡಿಕಾರಿದ್ದ ಯೋಗ ಗುರು ಬಾಬಾ ರಾಮ್​ದೇವ್​ ಕೋವಿಡ್​ 19 ಚಿಕಿತ್ಸೆಯಲ್ಲಿ ಅಲೋಪಥಿ ಔಷಧಿಯನ್ನು ಬಳಸಿದ ಕಾರಣಕ್ಕೆ ದೇಶದಲ್ಲಿ ಅನೇಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...