ಅಲೋಪಥಿ ವೈದ್ಯ ಪದ್ಧತಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೋಗಗುರು ಬಾಬಾ ರಾಮದೇವ್ ವಿರುದ್ಧ ದೆಹಲಿ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಕೋವಿಡ್ 19 ಚಿಕಿತ್ಸೆಯ ವಿಚಾರದಲ್ಲಿ ವೈದ್ಯರ ನಡೆಯ ಬಗ್ಗೆ ರಾಮದೇವ್ ಕಿಡಕಾರಿದ್ದರು.
ತಪ್ಪಾದ ಮಾಹಿತಿಯನ್ನು ಹರಡುತ್ತಿದ್ದಾರೆ ಎಂಬ ಕಾರಣವನ್ನು ನೀಡಿ ದೆಹಲಿ ಹೈಕೋರ್ಟ್ ಈ ನೋಟಿಸ್ನ್ನು ಜಾರಿ ಮಾಡಿದೆ. ಈ ಸಂಬಂಧ ಆಗಸ್ಟ್ 10ರಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದ್ದಂತೆಯೇ ಬಾಬಾ ರಾಮದೇವ್ ಅಲೋಪಥಿ ವೈದ್ಯ ಪದ್ಧತಿ ವಿರುದ್ಧ ತಾವು ಮಾಡಿದ್ದ ಆರೋಪವನ್ನು ಹಿಂದಕ್ಕೆ ಪಡೆದಿದ್ದರು. ಅಲೋಪಥಿ ವೈದ್ಯ ಪದ್ಧತಿಯ ವಿರುದ್ಧ ಕಿಡಿಕಾರಿದ್ದ ಯೋಗ ಗುರು ಬಾಬಾ ರಾಮ್ದೇವ್ ಕೋವಿಡ್ 19 ಚಿಕಿತ್ಸೆಯಲ್ಲಿ ಅಲೋಪಥಿ ಔಷಧಿಯನ್ನು ಬಳಸಿದ ಕಾರಣಕ್ಕೆ ದೇಶದಲ್ಲಿ ಅನೇಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು.