ಸಲಿಂಗಕಾಮಿ ಯುವತಿ ವಿವಾಹಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಯುವತಿಗೆ ವಿಚ್ಛೇದನ ನೀಡುವಂತೆ ಪತಿಗೆ ಸೂಚನೆ ನೀಡಿದೆ. ಇಚ್ಛೆಗೆ ವಿರುದ್ಧವಾಗಿ ವ್ಯಕ್ತಿಯೊಬ್ಬನ ಜೊತೆ ಯುವತಿಯನ್ನು ಮದುವೆ ಮಾಡಿಸಲಾಗಿತ್ತು. ಈ ಬಗ್ಗೆ ಯುವತಿ ನೀಡಿದ್ದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಯುವತಿಗೆ ಸೂಕ್ತ ರಕ್ಷಣೆ ನೀಡುವಂತೆ ಸೂಚನೆ ನೀಡಿದೆ.
ಸಲಿಂಗಗಾಮಿ ಯುವತಿ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಿದ್ದ ಕುಟುಂಬಸ್ಥರು ಲೈಂಗಿಕ ದೃಷ್ಟಿಕೋನ ಬದಲಿಸಿಕೊಳ್ಳುವಂತೆ ಹೇಳಿದ್ದರು. ಆದ್ರೆ ಮಾರ್ಚ್ 7,2021 ರಂದು ಗಂಡನ ಮನೆ ಬಿಟ್ಟು ಓಡಿ ಬಂದಿದ್ದ ಯುವತಿ ದೆಹಲಿಯ ಎನ್ಜಿಒ ಒಂದರ ಸಹಾಯ ಪಡೆದಿದ್ದಳು. ಎನ್ಜಿಒದ ಆಶ್ರಯ ಮನೆಯಲ್ಲಿ ಆಶ್ರಯ ಪಡೆದಿದ್ದ ಯುವತಿ ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಳು. ಎನ್ಜಿಒಗೆ ಬಂದ ಕುಟುಂಬಸ್ಥರು ಅಲ್ಲಿ ಗಲಾಟೆ ಮಾಡಿದ್ದರು ಎನ್ನಲಾಗಿದೆ.
2ನೇ ಮದುವೆ ವಿರೋಧಿಸಿದ್ದಕ್ಕೆ ವಿದ್ಯುತ್ ಕಂಬವನ್ನೇರಿದ ವೃದ್ಧ…!
ಇದ್ರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮುಕ್ತಾ ಗುಪ್ತಾ, ವಯಸ್ಕ ಯುವತಿಗೆ ಪತಿ ಅಥವಾ ತಂದೆ-ತಾಯಿ ಜೊತೆ ಇರುವಂತೆ ಒತ್ತಾಯ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ವಿಚ್ಛೇದನಕ್ಕೆ ಸಂಬಂಧಿಸಿದ ಕೆಲಸ ಶುರು ಮಾಡುವಂತೆ ಸೂಚನೆ ನೀಡಿರುವ ಕೋರ್ಟ್, ಯುವತಿಗೆ ನೆರವಾದ ಎನ್ಜಿಒಗೆ ಕುಟುಂಬಸ್ಥರು ಹಾನಿ ಮಾಡುವಂತಿಲ್ಲ ಎಂದಿದ್ದಾರೆ.