ಎಲೆಕ್ಟ್ರಿಕ್ ವಾಹನಗಳಿಗೆ ಸಾಕಷ್ಟು ಒತ್ತು ನೀಡುತ್ತಿರುವ ದೆಹಲಿ ಸರ್ಕಾರ, ತಮ್ಮ ಆಡಳಿತದ ಗಡಿಯಲ್ಲಿ ಸಾಕಷ್ಟು ಸುಧಾರಣೆಗಳನ್ನ ತಂದಿದೆ. ಇದಕ್ಕೆ ಅನುಗುಣವಾಗಿ, ಈಗ ಶಾಪಿಂಗ್ ಮಾಲ್‌ಗಳು ಇವಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ಸಹಾಯ ಮಾಡುವ ಮಾರ್ಗದರ್ಶಿ ಪುಸ್ತಕವನ್ನು ಪರಿಚಯಿಸಲು ಸಿದ್ಧವಾಗಿದೆ. TNN ವರದಿಯ ಪ್ರಕಾರ, ಈ ಮಾರ್ಗದರ್ಶಿ ಪುಸ್ತಕವನ್ನು ಈ ವಾರ ಅಂದರೆ ಫೆಬ್ರವರಿ 4 ರಂದು ಬಿಡುಗಡೆ ಮಾಡಲಾಗುತ್ತದೆ.
ಈ ಮಾರ್ಗದರ್ಶಿ ಪುಸ್ತಕವನ್ನು ದೆಹಲಿಯ ಡೈಲಾಗ್ ಅಂಡ್ ಡೆವಲಪ್‌ಮೆಂಟ್ ಕಮಿಷನ್ (ಡಿಡಿಸಿ) ಮತ್ತು ಭಾರತದ ವಿಶ್ವ ಸಂಪನ್ಮೂಲ ಸಂಸ್ಥೆ ಜಂಟಿಯಾಗಿ ಅಭಿವೃದ್ಧಿಪಡಿಸಿದೆ. ಇವಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸಲು ದೆಹಲಿಯ ಶಾಪಿಂಗ್ ಮಾಲ್‌ಗಳಿಗೆ ಇದು ಸಹಾಯ ಮಾಡುತ್ತದೆ.
ಟ್ರಾವೆಲ್ ಬ್ಯಾಗ್ ನಲ್ಲಿ ಯುವಕನೊಂದಿಗೆ ಹಾಸ್ಟೆಲ್ ಗೆ ಬಂದ ಯುವತಿ; ಸಾಮಾಜಿಕ ಜಾಲತಾಣಗಳಲ್ಲಿ ಹಳೆ ವಿಡಿಯೋ ಮತ್ತೆ ವೈರಲ್
ವಿವಿಧ ಅಧ್ಯಯನಗಳ ಪ್ರಕಾರ, ಒಬ್ಬ ವ್ಯಕ್ತಿಯು ಶಾಪಿಂಗ್ ಮಾಲ್‌ನಲ್ಲಿ ಸರಾಸರಿ 90 ನಿಮಿಷಗಳನ್ನು ಕಳೆಯುತ್ತಾನೆ. ಈ ಸಮಯವನ್ನು ಎಲೆಕ್ಟ್ರಿಕ್ ವಾಹನವನ್ನು ಚಾರ್ಜ್ ಮಾಡಲು ಬಳಸಬಹುದು. ಮಾಲ್‌ಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೊಂದಿಸುವುದು EV ಬಳಕೆದಾರರಿಗೆ ಸಹಾಯಕವಾಗುತ್ತದೆ. ಶಾಪಿಂಗ್ ಮಾಲ್‌ಗಳಿಗೂ ಉತ್ತಮವೆ ಹೌದು ಎಂದು ಲೆಕ್ಕಾಚಾರ ಹಾಕಿರುವ ದೆಹಲಿ ಸರ್ಕಾರಕ್ಕೆ ಈ ನಿರ್ಧಾರಕ್ಕೆ ಬಂದಿದೆ.
ಪರೀಕ್ಷಾ ಪಠ್ಯ ಕಡಿತಕ್ಕೆ ಮನವಿ ಮಾಡಿದ ಪಿಯುಸಿ ವಿದ್ಯಾರ್ಥಿಗಳು….!
ನಾಳೆ ಬಿಡುಗಡೆಯಾಗಲಿರುವ ಮಾರ್ಗದರ್ಶಿ ಪುಸ್ತಕವು EV ಚಾರ್ಜಿಂಗ್ ಪಾಯಿಂಟ್‌ಗಳ ಪ್ರಾಮುಖ್ಯತೆ, ಮಾಲ್‌ಗಳಲ್ಲಿ ಸ್ಕೋಪ್ ಅನ್ನು ನಿರ್ಣಯಿಸುವುದು ಮತ್ತು EV ಚಾರ್ಜಿಂಗ್ ಪಾಯಿಂಟ್‌ಗಳನ್ನು ಪರಿಣಾಮಕಾರಿಯಾಗಿಸಲು ಕೈಗೊಳ್ಳಬೇಕಿರುವ ಯೋಜನೆ ಹಾಗೂ ಡೆವಲಪ್ ಮಾಡುವ ಹಂತಗಳು ಸೇರಿದಂತೆ ಹಲವಾರು ಅಂಶಗಳನ್ನು ಹೊಂದಿದೆ. ಇದರೊಂದಿಗೆ, ದೆಹಲಿ ಸರ್ಕಾರವು ಶಾಪಿಂಗ್ ಮಾಲ್‌ಗಳನ್ನು ಇವಿ ಪರಿಸರ ವ್ಯವಸ್ಥೆಯ ಅಗತ್ಯ ಭಾಗವನ್ನಾಗಿ ಮಾಡಲು ಬಯಸಿದೆ.