alex Certify ಟ್ರಾವೆಲ್ ಬ್ಯಾಗ್ ನಲ್ಲಿ ಯುವಕನೊಂದಿಗೆ ಹಾಸ್ಟೆಲ್ ಗೆ ಬಂದ ಯುವತಿ; ಸಾಮಾಜಿಕ ಜಾಲತಾಣಗಳಲ್ಲಿ ಹಳೆ ವಿಡಿಯೋ ಮತ್ತೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಾವೆಲ್ ಬ್ಯಾಗ್ ನಲ್ಲಿ ಯುವಕನೊಂದಿಗೆ ಹಾಸ್ಟೆಲ್ ಗೆ ಬಂದ ಯುವತಿ; ಸಾಮಾಜಿಕ ಜಾಲತಾಣಗಳಲ್ಲಿ ಹಳೆ ವಿಡಿಯೋ ಮತ್ತೆ ವೈರಲ್

ಉಡುಪಿ: ಯುವತಿಯೊಬ್ಬಳು ಸೂಟ್ ಕೇಸ್ ನಲ್ಲಿ ಯುವಕರ ಹಾಸ್ಟೆಲ್ ಗೆ ಎಂಟ್ರಿ ಕೊಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋ ಸಾಕಷ್ಟು ಅನುಮಾನಗಳಿಗೂ ಕಾರಣವಾಗಿದೆ.

ಹಾಸ್ಟೆಲ್ ಗೆ ಬಂದ ಯುವಕನೊಬ್ಬ ತಂದಿದ್ದ ಟ್ರಾವೆಲ್ ಬ್ಯಾಗ್ ಪರಿಶೀಲನೆ ನಡೆಸಿದಾಗ ಬ್ಯಾಗ್ ನಿಂದ ಹೊರಬಂದ ಯುವತಿಯನ್ನು ಕಂಡು ಭದ್ರತಾ ಸಿಬ್ಬಂದಿಗಳೇ ಶಾಕ್ ಆಗಿದ್ದಾರೆ.

ಉಡುಪಿಯ ಮಣಿಪಾಲ್ ಕಾಲೇಜು ಕ್ಯಾಂಪಸ್ ನಲ್ಲಿರುವ ಹುಡುಗರ ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ ಹಾಸ್ಟೆಲ್ ಭದ್ರತಾ ಸಿಬ್ಬಂದಿಗಳು ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದಿದ್ದಾರೆ. ಅಲ್ಲದೇ ಮಣಿಪಾಲ್ ಪೊಲೀಸ್ ಠಾಣೆಯಲ್ಲಿ ಕೂಡ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಇದು ಹಳೇ ವಿಡಿಯೋ ಆಗಿದ್ದು, ಇದೀಗ ಮತ್ತೆ ವೈರಲ್ ಆಗಿದೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆ ಹುಡುಗರ ಹಾಸ್ಟೆಲ್ ಗೆ ಯುವಕನೊಬ್ಬ ಟ್ರಾವೆಲ್ ಬ್ಯಾಗ್ ನಲ್ಲಿ ಯುವತಿಯನ್ನು ಪಾರ್ಸಲ್ ರೀತಿ ತರಲು ಕಾಣವೇನು ? ಭದ್ರತಾ ಸಿಬ್ಬಂದಿಗಳಿಗೆ ಸಾಕಷ್ಟು ದಿನಗಳಿಂದ ಅನುಮಾನ ಇದ್ದೇ ಟ್ರಾವಲ್ ಬ್ಯಾಗ್ ತಪಾಸಣೆ ನಡೆಸಿದರೆ ? ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋದ ಅಸಲಿಯತ್ತೇನು ? ಎಂಬ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುತ್ತಿದ್ದು ತನಿಖೆಯಿಂದಷ್ಟೇ ಸತ್ಯಾಸತ್ಯತೆ ಗೊತ್ತಾಗಬೇಕಿದೆ. ಈ ವಿಡಿಯೋ ಸಾಕಷ್ಟು ಮೆಮೆಗಳಿಗೂ ಕಾರಣವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...