alex Certify ವೈದ್ಯಕೀಯ ವರದಿ, ಐಟಿ ರಿರ್ಟನ್ಸ್​ ಸಲ್ಲಿಸುವಂತೆ ಯೋಯೋ ಹನಿಸಿಂಗ್​ಗೆ ಕೋರ್ಟ್ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈದ್ಯಕೀಯ ವರದಿ, ಐಟಿ ರಿರ್ಟನ್ಸ್​ ಸಲ್ಲಿಸುವಂತೆ ಯೋಯೋ ಹನಿಸಿಂಗ್​ಗೆ ಕೋರ್ಟ್ ಸೂಚನೆ

ಕೌಟುಂಬಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಬಾಲಿವುಡ್​ ರ್ಯಾಪರ್​ ಯೋ ಯೋ ಹನಿ ಸಿಂಗ್​​ಗೆ ವೈದ್ಯಕೀಯ ವರದಿ ಹಾಗೂ ಐಟಿ ರಿರ್ಟನ್ಸ್​ ವರದಿ ಸಲ್ಲಿಸುವಂತೆ ದೆಹಲಿ ಸಿಟಿ ಕೋರ್ಟ್ ಸೂಚನೆ ನೀಡಿದೆ. ಅಲ್ಲದೇ ಕಾನೂನಿನ ಎದುರು ಯಾರೂ ದೊಡ್ಡವರಲ್ಲ ಎಂದು ಇದೇ ವೇಳೆ ಕೋರ್ಟ್​ ಹೇಳಿದೆ.

ಯೋ ಯೋ ಹನಿ ಸಿಂಗ್​​ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಕೋರ್ಟ್​ ಎದುರು ಹೇಳಿರುವ ಸಿಂಗ್​ ಪರ ವಕೀಲ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ಕೋರಿದ್ದಾರೆ. ಅಲ್ಲದೇ ಮುಂದಿನ ವಿಚಾರಣೆ ಯೋ ಯೋ ಹನಿ ಸಿಂಗ್​ ಕೋರ್ಟ್​ಗೆ ಹಾಜರಾಗಲಿದ್ದಾರೆ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದ್ದಾರೆ.
ನ್ಯಾಯಾಲಯದ ಸೂಚನೆಗೆ ಪ್ರತಿಕ್ರಿಯಿಸಿದ ಸಿಂಗ್​ ಪರ ವಕೀಲ, ಆದಷ್ಟು ಬೇಗ ಯೋಯೋ ಹನಿ ಸಿಂಗ್​ರ ವೈದ್ಯಕೀಯ ವರದಿ ಹಾಗೂ ಐಟಿ ರಿರ್ಟನ್ಸ್​ ಸಲ್ಲಿಕೆ ಮಾಡುವುದಾಗಿ ಹೇಳಿದ್ದಾರೆ.

ಮುಂದಿನ ವಿಚಾರಣೆಯ ದಿನಾಂಕವಾದ ಸೆಪ್ಟೆಂಬರ್​ 3ರೊಳಗಾಗಿ ತಮ್ಮ ಮುಂದೆ ಹಾಜರಾಗುವಂತೆ ಕೋರ್ಟ್ ಯೋ ಯೋ ಹನಿ ಸಿಂಗ್​ಗೆ ಸೂಚನೆ ನೀಡಿದೆ.
ಆಗಸ್ಟ್​ 3ರಂದು ಯೋ ಯೋ ಹನಿ ಸಿಂಗ್​ ಪತ್ನಿ ಶಾಲಿನಿ ತಲ್ವಾರ್​​ ಪತಿಯಿಂದ ತಮ್ಮ ಮೇಲೆ ಕೌಟುಂಬಿಕ ದೌರ್ಜನ್ಯವಾಗಿದೆ ಎಂದು ಆರೋಪಿಸಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...