ಕೌಟುಂಬಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಬಾಲಿವುಡ್ ರ್ಯಾಪರ್ ಯೋ ಯೋ ಹನಿ ಸಿಂಗ್ಗೆ ವೈದ್ಯಕೀಯ ವರದಿ ಹಾಗೂ ಐಟಿ ರಿರ್ಟನ್ಸ್ ವರದಿ ಸಲ್ಲಿಸುವಂತೆ ದೆಹಲಿ ಸಿಟಿ ಕೋರ್ಟ್ ಸೂಚನೆ ನೀಡಿದೆ. ಅಲ್ಲದೇ ಕಾನೂನಿನ ಎದುರು ಯಾರೂ ದೊಡ್ಡವರಲ್ಲ ಎಂದು ಇದೇ ವೇಳೆ ಕೋರ್ಟ್ ಹೇಳಿದೆ.
ಯೋ ಯೋ ಹನಿ ಸಿಂಗ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಕೋರ್ಟ್ ಎದುರು ಹೇಳಿರುವ ಸಿಂಗ್ ಪರ ವಕೀಲ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ಕೋರಿದ್ದಾರೆ. ಅಲ್ಲದೇ ಮುಂದಿನ ವಿಚಾರಣೆ ಯೋ ಯೋ ಹನಿ ಸಿಂಗ್ ಕೋರ್ಟ್ಗೆ ಹಾಜರಾಗಲಿದ್ದಾರೆ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದ್ದಾರೆ.
ನ್ಯಾಯಾಲಯದ ಸೂಚನೆಗೆ ಪ್ರತಿಕ್ರಿಯಿಸಿದ ಸಿಂಗ್ ಪರ ವಕೀಲ, ಆದಷ್ಟು ಬೇಗ ಯೋಯೋ ಹನಿ ಸಿಂಗ್ರ ವೈದ್ಯಕೀಯ ವರದಿ ಹಾಗೂ ಐಟಿ ರಿರ್ಟನ್ಸ್ ಸಲ್ಲಿಕೆ ಮಾಡುವುದಾಗಿ ಹೇಳಿದ್ದಾರೆ.
ಮುಂದಿನ ವಿಚಾರಣೆಯ ದಿನಾಂಕವಾದ ಸೆಪ್ಟೆಂಬರ್ 3ರೊಳಗಾಗಿ ತಮ್ಮ ಮುಂದೆ ಹಾಜರಾಗುವಂತೆ ಕೋರ್ಟ್ ಯೋ ಯೋ ಹನಿ ಸಿಂಗ್ಗೆ ಸೂಚನೆ ನೀಡಿದೆ.
ಆಗಸ್ಟ್ 3ರಂದು ಯೋ ಯೋ ಹನಿ ಸಿಂಗ್ ಪತ್ನಿ ಶಾಲಿನಿ ತಲ್ವಾರ್ ಪತಿಯಿಂದ ತಮ್ಮ ಮೇಲೆ ಕೌಟುಂಬಿಕ ದೌರ್ಜನ್ಯವಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.