alex Certify ಉದ್ಯಮಿಗಳಿಗೆ ಹಣದ ವಂಚನೆ ಆರೋಪದಡಿಯಲ್ಲಿ ಬಾಲಿವುಡ್​ ನಿರ್ಮಾಪಕ ಅರೆಸ್ಟ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯಮಿಗಳಿಗೆ ಹಣದ ವಂಚನೆ ಆರೋಪದಡಿಯಲ್ಲಿ ಬಾಲಿವುಡ್​ ನಿರ್ಮಾಪಕ ಅರೆಸ್ಟ್​…!

ಅಗ್ಗದ ಸಾಲ ನೀಡೋದಾಗಿ ನಂಬಿಸಿ ಉದ್ಯಮಿಗಳನ್ನು ವಂಚಿಸಿದ ಆರೋಪದ ಅಡಿಯಲ್ಲಿ ಬಾಲಿವುಡ್​ ನಿರ್ಮಾಪಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ದಕ್ಷಿಣ ದೆಹಲಿಯ ನಿವಾಸಿ 55 ವರ್ಷದ ಅಜಯ್​ ಯಾದವ್​ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ಅಜಯ್​​​ ದೆಹಲಿ ಉದ್ಯಮಿ ರಾಹುಲ್​ ನಾಥ್​ರಿಗೆ 65 ಕೋಟಿ ರೂಪಾಯಿ ಸಾಲ ಕೊಡಿಸೋದಾಗಿ ನಂಬಿಸಿ 32 ಲಕ್ಷ ರೂಪಾಯಿ ದೋಚಿದ್ದರು.

ಯಾದವ್​​ ಲವ್​ ಫಿರ್​ ಕಭಿ, ಓವರ್​ಟೈಮ್​, ಭಡಾಸ್​ ಹಾಗೂ ಸಸ್ಪೆನ್ಸ್​ ಸೇರಿದಂತೆ ಇನ್ನು ಕೆಲ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ .
ಯಾದವ್​ರನ್ನು ಈ ಹಿಂದೆ ಮುಂಬೈನ ಕಾಂಡಿವಿಲಿ ಯುನಿಟ್​​ನ ಕ್ರೈಂ ಬ್ರ್ಯಾಂಚ್​ ಪೊಲೀಸರು ಬಂಧಿಸಿದ್ದರು.

ಇವರು 2015ರಲ್ಲಿ ನಾಪತ್ತೆಯಾಗಿದ್ದ ಇವರನ್ನು ಮುಂಬೈ, ದೆಹಲಿ, ಮಧ್ಯ ಪ್ರದೇಶ ಹಾಗೂ ಉತ್ತರ ಪ್ರದೇಶದಲ್ಲಿ ರೇಡ್​ ಮಾಡಿದ ಬಳಿಕ ಬಂಧಿಸಲಾಗಿತ್ತು. ಕೊನೆಗೂ ಅವರನ್ನು ಮಥುರಾದಲ್ಲಿ ಬಂಧಿಸಲಾಯ್ತು. ಮೋಸದ ಹಣವನ್ನೆಲ್ಲ ಈತ ಸಿನಿಮಾದಲ್ಲಿ ಹೂಡಿಕೆ ಮಾಡಿದ್ದ. ಆದರೆ ಬಹುತೇಕ ಎಲ್ಲಾ ಸಿನಿಮಾಗಳು ಫ್ಲಾಪ್​ ಆಗಿವೆ ಎಂದು ಡಿಸಿಪಿ ಅತುಲ್​ ಕುಮಾರ್ ಠಾಕೂರ್​ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...