alex Certify ರಾಜ್‌ ಕುಂದ್ರಾ – ಶಿಲ್ಪಾ ಶೆಟ್ಟಿ ದಂಪತಿಗೆ ಎದುರಾಯ್ತು ಮತ್ತೊಂದು ಸಂಕಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್‌ ಕುಂದ್ರಾ – ಶಿಲ್ಪಾ ಶೆಟ್ಟಿ ದಂಪತಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ಹಾಗೂ ಪತಿ ರಾಜ್​ ಕುಂದ್ರಾ ವಿರುದ್ಧ ವಂಚನೆ ಆರೋಪದ ಸಂಬಂಧ ದೆಹಲಿ ಉದ್ಯಮಿ ನೀಡಿದ ದೂರಿನ ಸಂಬಂಧ ಪೊಲೀಸರು ಯಾವೆಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದ್ದಾರೆ ಎಂಬುದರ ಬಗ್ಗೆ ದೆಹಲಿ ಕೋರ್ಟ್​ ಮಾಹಿತಿ ಕೇಳಿದೆ. ಈ ಸಂಬಂಧ ಪ್ರಕರಣದ ವಿಚಾರಣೆಯನ್ನು ನವೆಂಬರ್​​ 9ಕ್ಕೆ ಮುಂದೂಡಲಾಗಿದೆ ಎಂದು ದೂರುದಾರ ಪರ ವಕೀಲ ಹೇಳಿದ್ದಾರೆ.

2018ರಲ್ಲಿ ಮುಂಬೈ ಮೂಲದ ಕಂಪನಿಯೊಂದರಲ್ಲಿ ಲಕ್ಷಗಟ್ಟಲೇ ಹಣ ಹೂಡಿಕೆ ಮಾಡುವಂತೆ ಹೇಳಿ ಪ್ರೇರೆಪಿಸಿ ವಂಚನೆ ಮಾಡಲಾಗಿದೆ ಎಂದು ವಿಶಾಲ್​ ಗೋಯಲ್​ ಆರೋಪಿಸಿದ್ದಾರೆ. ಬಳಿಕ ಈ ದಂಪತಿ ತಮಗೆ ಯಾವುದೆ ಲಾಭದ ಮೊತ್ತ ನೀಡಿಲ್ಲ ಹಾಗೂ ಷೇರು ಮೌಲ್ಯ ಕೂಡ ಕುಸಿದಿದೆ ಎಂದು ಆರೋಪಿಸಿದ್ದಾರೆ.

ಸ್ವಾರ್ಥದ ಕೆಲಸಕ್ಕೆ ಈ ಹಣವನ್ನು ಹೂಡಿಕೆ ಮಾಡಲು ಪ್ಲಾನ್​ ಮಾಡಿದ್ದ ರಾಜ್​ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಉದ್ದೇಶಪೂರ್ವಕವಾಗಿಯೇ ನಮಗೆ 41, 33,782 ರೂಪಾಯಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದಾರೆ. ಈ ಹಣವನ್ನು ದಂಪತಿ ವೈಯಕ್ತಿಕ ಲಾಭಕ್ಕೆ ಬಳಸಿಕೊಂಡಿದ್ದಾರೆ ಹಾಗೂ ಕಾನೂನುಬಾಹಿರ ಚಟುವಟಿಕೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತಮಗೆ ಕೆಲ ದಿನಗಳ ಹಿಂದಷ್ಟೇ ಈ ಕಂಪನಿಯು ಅಶ್ಲೀಲ ವಿಡಿಯೋಗಳನ್ನು ಮಾಡುವ ಕೆಲಸ ಮಾಡುತ್ತಿದೆ ಎಂಬ ವಿಚಾರ ತಿಳಿಯಿತು ಎಂದು ಗೋಯಲ್​ ಹೇಳಿದ್ದಾರೆ. ತಾವು ಹಣ ಹೂಡಿಕೆ ಮಾಡುವ ವೇಳೆ ಕಂಪನಿಯು ಸೌಂದರ್ಯ ವರ್ಧಕ, ಆ್ಯನಿಮೇಷನ್​ ಹಾಗೂ ಗೇಮಿಂಗ್​ ಅಪ್ಲಿಕೇಶನ್​ಗಳನ್ನು ಮಾರಾಟ ಮಾಡುತ್ತದೆ ಎಂದು ನಂಬಿಸಿದ್ದರು ಎಂದು ಗೋಯಲ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...