ಮಹಿಳೆಯನ್ನ ಬಲವಂತಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ತನ್ನ ಕಚೇರಿಯಲ್ಲೇ ಮದುವೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದ ಬಳಿಕ ದೆಹಲಿ ಬಾರ್ ಕೌನ್ಸಿಲ್ ವಕೀಲರೊಬ್ಬರ ಪರವಾನಿಗೆಯನ್ನ ಅಮಾನತುಗೊಳಿಸಿದೆ.
ವಕೀಲ ಇಕ್ಬಾಲ್ ಮಲ್ಲಿಕ್ ವಿರುದ್ಧ ಸೋಹಾನ್ ಸಿಂಗ್ ತೋಮರ್ ಎಂಬವರು ದೂರನ್ನ ಸಲ್ಲಿಸಿದ್ದಾರೆ. ತಮ್ಮ ಪುತ್ರಿಯನ್ನ ಬಲವಂತವಾಗಿ ಮತಾಂತರ ಮಾಡಿ ಕಾರ್ಕಾಡೂಮ ಜಿಲ್ಲಾ ಕೋರ್ಟ್ನ ಕೊಠಡಿಯಲ್ಲಿ ವಿವಾಹ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ದೆಹಲಿ ಬಾರ್ ಕೌನ್ಸಿಲ್ ಕಾರ್ಯದರ್ಶಿ ಪಿಯೂಷ್ ಗುಪ್ತಾ, ವಕೀಲ ಇಕ್ಬಾಲ್ ಮಲಿಕ್ಗೆ ನೋಟಿಸ್ ನೀಡಿದ್ದು ಉಪಾಧ್ಯಕ್ಷ , ಮಾಜಿ ಅಧ್ಯಕ್ಷ ಹಾಗೂ ತಮ್ಮನ್ನೂ ಸೇರಿದಂತೆ ಒಂದು ಸಮಿತಿಯನ್ನ ರಚನೆ ಮಾಡಲಾಗಿದ್ದು ಈ ಪ್ರಕರಣ ಸಂಬಂಧ ಮೂರು ತಿಂಗಳಲ್ಲಿ ತೀರ್ಪು ನೀಡಲಿದೆ ಎಂದು ಹೇಳಿದೆ.
1 ಗಂಟೆ ಅವಧಿಯಲ್ಲಿ 1 ಮಿಲಿಯನ್ ಸಸಿ ನೆಟ್ಟು ʼವಿಶ್ವ ದಾಖಲೆʼ
ಅಲ್ಲದೇ ಈ ವಿಚಾರಣೆ ಅವಧಿಯಲ್ಲಿ ಬಾರ್ ಕೌನ್ಸಿಲ್ ಇಕ್ಬಾಲ್ರ ಪರವಾನಿಗೆಯನ್ನ ಅಮಾನತು ಮಾಡಿದೆ. ಅಲ್ಲದೇ 7 ದಿನಗಳ ಒಳಗಾಗಿ ನೋಟಿಸ್ಗೆ ಉತ್ತರ ನೀಡುವಂತೆ ಹೇಳಿದೆ.
ವಿವಾಹ ಪ್ರಮಾಣ ಪತ್ರದ ಪ್ರಕಾರ ಈ ಬಲವಂತದ ಮದುವೆಯು ಜೂನ್ 3ರಂದು ನಡೆದಿದೆ. ಇನ್ನು ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಇಕ್ಬಾಲ್ ಮಲ್ಲಿಕ್, ನನಗೆ ಇಲ್ಲಿಯವರೆಗೆ ಯಾವುದೇ ನೋಟಿಸ್ ಬಂದಿಲ್ಲ. ಈ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾಗಿವೆ. ನಾನು ಯಾರಿಗೂ ಮದುವೆಯನ್ನ ಮಾಡಿಸಿಲ್ಲ. ಈ ಮಹಿಳೆಯು ನ್ಯಾಯಕ್ಕಾಗಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಳು. ಈಕೆ ತಂದೆಯ ವಿರುದ್ಧ ಆರೋಪ ಮಾಡಿದ್ದಾಳೆ ಎಂದು ಹೇಳಿದ್ದಾರೆ.